Ad Widget

ಕೊಡಿಯಾಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಕೊಡಿಯಾಲ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯು ಸೆ.30ರಂದು ಗ್ರಾಮ ಪಂಚಾಯತಿಯ ಮಿನಿ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ರೈ ಅಜ್ರಂಗಳರವರ ಅಧ್ಯಕ್ಷತೆಯಲ್ಲಿ
ನಡೆಯಿತು. ಸಾಮಾನ್ಯ ಸಭೆಯಲ್ಲಿ ಮ.ಗಾ.ಉ. ಖಾತ್ರಿ ಯೋಜನೆಯ ಪ್ರಸ್ತುತ ಕಾಮಗಾರಿ ಬೇಡಿಕೆಗಳ ಬಗ್ಗೆ, ಎರೆಹುಳು ತೊಟ್ಟಿ, ಬಚ್ಚಲುಗುಂಡಿ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ವಸತಿ ರಹಿತರ ಪಟ್ಟಿ ಪರಿಷ್ಕರಣೆ, ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಆಯೋಜಿಸುವ ಜಾಥಾ, ಶ್ರಮದಾನ, ಸ್ವಚ್ಛತಾ ಚೀಲ (ಬೋರೋ ಬ್ಯಾಗ್) ವಿತರಣೆ ಹಾಗೂ ವಿಶೇಷ ಗ್ರಾಮಸಭೆಯ ಬಗ್ಗೆ ಚರ್ಚೆ ಹಾಗೂ ಮಾಹಿತಿ ವಿನಿಮಯ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ರೈ ರವರು ಸಭೆಯ ವರದಿ ಹಾಗೂ ಸಾಮಾನ್ಯ ಸಭೆಯ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸಿಬ್ಬಂದಿ ರಾಜೇಶ್ವರಿ ಜಮಾ ಖರ್ಚಿನ ವರದಿ ವಾಚಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯರಾದ ಕರುಣಾಕರ ಆಳ್ವ, ಶ್ರೀಮತಿ ವಿಜಯಕುಮಾರಿ, ಶ್ರೀಮತಿ ಚಿತ್ರಾ, ಶ್ರೀಮತಿ ಯಶವಂತಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಪಂಚಾಯತ್ ಸಿಬ್ಬಂದಿಗಳಾದ ಗುರುರಾಜ್ ಟಿ.ಎಲ್ ಮತ್ತು ಶ್ರೀಮತಿ ಹರಿಣಿ ಸಹಕರಿಸಿದರು. ಕು.ರೇವತಿ ಧನ್ಯವಾದಗೈದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!