Ad Widget

ಸಾಮಾಜಿಕ ಜಾಲತಾಣಗಳಿಂದಾಗಿ ಹುಟ್ಟೂರಿನ ಸಂಪರ್ಕವಿರುವುದೇ ಸದ್ಯಕ್ಕೆ ತೃಪ್ತಿ

ನಾನು ಉದ್ಯೋಗ ನಿಮಿತ್ತ ಅಬುಧಾಬಿ UAE ಯಲ್ಲಿದ್ದೇನೆ, ಇಲ್ಲಿ ಸಂಪೂರ್ಣ ಲೋಕ್ಡೌನ್ ಇಲ್ಲ ಆದರೂ ನಾನು ಕೆಲಸ ಮಾಡುತ್ತಿರುವ ಉದ್ಯಮ ಹೋಟೆಲ್ ಆದುದರಿಂದ ಒಂದೂವರೆ ತಿಂಗಳಿಂದ ಬಾಗಿಲು ಹಾಕಬೇಕಾಗಿ ಬಂದಿದೆ, ವಿಮಾನ ಸೇವೆಯು ರದ್ದುಗೊಳ್ಳುವುದರೊಂದಿಗೆ ತಕ್ಷಣಕ್ಕೆ ಊರಿಗೆ ಬರುವ ಅವಕಾಶವನ್ನು ಕಳೆದುಕೊಂಡು ಇಂತಹ ಕಷ್ಟದ ಸಂದರ್ಭದಲ್ಲಿ ಮನೆಯವರೊಂದಿಗೆ ಇರುವ ಅವಕಾಶವನ್ನು ಕಳೆದುಕೊಂಡು, ರೂಮಿನಲ್ಲಿಯೇ ದಿನ ಕಳೆಯಬೇಕಾಗಿ ಬಂದಿದೆ. ಉದ್ಯಮ ಮುಂದಿನ ದಿನಗಳಲ್ಲಿ ಮತ್ತೆ ಸೇವೆಗೆ ತೆರೆದುಕೊಳ್ಳುತ್ತದೆ ಎನ್ನುವ ಆಶಾಭಾವನೆಯಿಂದ ದಿನ ದೂಡುತ್ತಿದ್ದೇವೆ..
ಒಂದು ಸಮದಾನವೆಂದರೆ ಹೆಚ್ಚಿನವರು ಸಾಮಾಜಿಕ ಜಾಲತಾಣಗಳ ಸಂಪರ್ಕದಲ್ಲಿರುವುದರಿಂದ ಇಲ್ಲಿ ಇದ್ದುಕೊಂಡೆ ಊರಿನಲ್ಲಿ ಒಂದಷ್ಟು ಅಗತ್ಯ ಸೇವೆಗಳನ್ನು ಪಡೆಯಲು ಹಾಗೂ ಸಹಾಯದ ಅಗತ್ಯವಿರುವವರಿಗೆ ನನ್ನಿಂದಾಗುವ ಸಹಾಯ ಮಾಡಲು ಸಾಧ್ಯವಾಗಿದೆ ಎಂಬದೇ ತೃಪ್ತಿ.

ಕಮಲಾಕ್ಷ ಪಾಲಾರು
ಅಬುದಾಬಿ, ಯು. ಎ. ಇ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!