- Thursday
- October 31st, 2024
ಈ ಸಂಕಷ್ಟದ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೆಲವೊಂದು ಯೋಜನೆಗಳನ್ನು ಪ್ಯಾಕೇಜ್ ಮೂಲಕ ಘೋಷಿಸಿರುವುದನ್ನು ಸ್ವಾಗತಿಸುವುದಾದರೂ ಅದರ ಸಾಧಕ ಭಾದಕ ಮತ್ತು ಅದರ ಜಾರಿ ಹಿನ್ನಲೆಯ ಬಳಿಕವಷ್ಟೇ ಯೋಜನೆಯ ಪ್ರಾಮುಖ್ಯತೆ ಜನರಿಗೆ ತಿಳಿಯಬಹುದು.ವಾಸ್ತವವಾಗಿ ಜನ ಸಾಮಾನ್ಯ ಈ ಮೂರು ತಿಂಗಳ ಅವಧಿಯಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಮಾತನಾಡುತ್ತಿರುವುದೇ ಹೆಚ್ಚು. ಉದಾಹರಣೆಗೆ ಲಾಕ್ ಡೌನ್ ಮಾಡುವ...
ರಾಜ್ಯ ಸರಕಾರದ ನಿರ್ಧಾರದಂತೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದಲೂ ನಾಳೆ ಬಸ್ ಸಂಚಾರ ಆರಂಭವಾಗಲಿದೆ. ಸದ್ಯಕ್ಕೆ ಸುಳ್ಯ- ಪುತ್ತೂರು, ಸುಳ್ಯ-ಮಡಿಕೇರಿ ಹಾಗೂ ಸುಳ್ಯ-ಬೆಂಗಳೂರು ನಡುವೆ ಮಾತ್ರ ಬಸ್ ಸಂಚಾರ ಇರುತ್ತದೆ. ಪ್ರತಿ ಬಸ್‌ನಲ್ಲೂ 3೦ ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಮಾಸ್ಕ್ ಧರಿಸಿದ ಪ್ರಯಾಣಿಕರಿಗಷ್ಟೇ ಅವಕಾಶವಿದೆ. ಬೆಂಗಳೂರಿಗೆ ೩೦ ಪ್ರಯಾಣಿಕರು ಇದ್ದರಷ್ಟೇ ಬಸ್ ಸಂಚಾರವಿರುತ್ತದೆ. ರಾತ್ರಿ ಪ್ರಯಾಣ ಇರುವುದಿಲ್ಲ....
ಹಲವು ವರ್ಷಗಳಿಂದ ಸುಬ್ರಹ್ಮಣ್ಯ ದಲ್ಲಿ ಹಿರಿಯ ಮರದ ಶಿಲ್ಪಿಯಾಗಿದ್ದ ಜನಾರ್ದನ ಆಚಾರ್ಯ (82) ಬಿಲದ್ವಾರ ಮೇ ೧೮ ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ , ಆರು ಜನ ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಜೂನ್ 25 ರಿಂದ ಜುಲೈ 4ರವರೆಗೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಇಂಗ್ಲೀಷ್, ಗಣಿತ ,ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ಗಳಿಗೆ ಒಂದೊಂದು ದಿನದ ಅಂತರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೇಳಿದರು. ಹಾಗೂ ಪಿಯುಸಿ ಯಲ್ಲಿ ಬಾಕಿ ಉಳಿದಿರುವ ಇಂಗ್ಲೀಷ್ ಪರೀಕ್ಷೆಯನ್ನು...
ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ, ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ವ್ಯಾಖ್ಯಾನಿಸಬಹುದು. [note] ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಫಲಿತಾಂಶವನ್ನು(ಗೆಲುವುಅಥವಾ ಸೋಲು) ನಿರ್ಧರಿಸುವಾಗ ದೈಹಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಿಯ ಕೌಶಲಗಳು ಪ್ರಮುಖ ಅಂಶಗಳಾಗುತ್ತವೆ. ದೈಹಿಕ ಚಟುವಟಿಕೆ ಜನರ,...
ಕೊರೊನದಿಂದಾಗಿ ಈ ಬಾರಿ ಒಲಿಂಪಿಕ್ಸ್ ನಡೆಯುವುದೇ ? ಎಂಬ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ. ಎಲ್ಲವೂ ಸರಿಯಾದ್ರೆ ಹಿಂದಿನ ನಿರ್ಧಾರ ದಂತೆ ಎಲ್ಲವೂ ನಡೆಯಲಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.2020 ರ ಬೇಸಿಗೆ ಒಲಿಂಪಿಕ್ಸ್ (ಅಧಿಕೃತವಾಗಿ XXXII ಒಲಿಂಪಿಯಾಡ್‌ನ ಕ್ರೀಡೆ) ಎಂದು ಕರೆಯಲ್ಪಡುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಟೋಕಿಯೊ 2020ಎಂದು ಕರೆಯಲಾಗುತ್ತದೆ, ಇದು ಮುಂಬರುವ ಅಂತರರಾಷ್ಟ್ರೀಯ...
ಮಹಾಮಾರಿ ಕರೊನಾದಿಂದಾಗಿ ಈಗ ಜಗತಿಕ ಕ್ರೀಡಾಲೋಕ ಸ್ತಬ್ಧಗೊಂಡಿದೆ. ಸದ್ಯಕ್ಕೆ ಕ್ರೀಡಾ ಚಟುವಟಿಕೆಗಳ ಪುನರಾರಂಭ ಸುಲಭವಲ್ಲ. ಆದರೆ ಮುಂದೊಂದು ದಿನ ಖಂಡಿತ ವಾಗಿಯೂ ಕ್ರೀಡಾಸ್ಪರ್ಧೆಗಳು ಮತ್ತೆ ಶುರುವಾಗಲಿವೆ. ಆದರೆ, ಅದು ಕರೊನಾ ಬರುವುದಕ್ಕೆ ಮುಂಚೆ ಇದ್ದುದಕ್ಕಿಂತ ಸಾಕಷ್ಟು ಬದಲಾವಣೆಗಳನ್ನು ಕಾಣಲಿದೆ ಮತ್ತು ಈ ಬದಲಾವಣೆಯೂ ಅಗತ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಹೇಗಿರಬಹುದು ಎಂಬ ಪ್ರಶ್ನೆಗೆ ಭಾರತದ...
ಶಾರೀರಿಕ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ. ಆದುದರಿಂದ ಶರೀರ ಶಿಕ್ಷಣದ ಅರ್ಥ ತಿಳಿಯುವ ಮೊದಲು ಶಿಕ್ಷಣದ ಅರ್ಥವನ್ನು ತಿಳಿಯೋಣ.ದೈಹಿಕ ಶಿಕ್ಷಣ. ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು...
ಅಜ್ಜಾವರ ಹೈಸ್ಕೂಲ್ ಬಳಿಯಿಂದ ಮಾರ್ಗ ಶಿವಾಜಿನಗರ ಮಂಡೆಕೋಲು ಕನ್ಯಾನ ತನಕ ವಿದ್ಯುತ್ ಲೈನ್ ಸ್ವಚ್ಛಗೊಳಿಸುವ ಕಾರ್ಯ ಮೇ.17ರ ಆದಿತ್ಯವಾರದಂದು ನಡೆಯಿತು. ವೀರಕೇಸರಿ ಮಿತ್ರವೃಂದದ ನೇತೃತ್ವದಲ್ಲಿ ನಡೆದ ಈ ಶ್ರಮದಾನ ಕಾರ್ಯದಲ್ಲಿ ಹಿಂದುಜಾಗರಣ ವೇಧಿಕೆ ಶಿವಾಜಿನಗರದ ಸದಸ್ಯರು ಹಾಗೂ ಇನ್ನಿತರ ಸಂಘಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದ್ದರು. ಸುಮಾರು ಅರವತ್ತು ಜನರಷ್ಟು ಶ್ರಮದಾನದಲ್ಲಿ ಭಾಗವಹಿಸಿದ್ದು ಅಡ್ಪಂಗಾಯ, ಮಾರ್ಗ, ಶಿವಾಜಿನಗರ, ಕನ್ಯಾನ...
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು ಮುಂಜಾನೆ ಭಾರೀ ಗಾಳಿ ಮಳೆ ಸುರಿದ ಪರಿಣಾಮವಾಗಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರಬಿದ್ದು, ಕೆಲಹೊತ್ತು ಸುಬ್ರಹ್ಮಣ್ಯ-ಏನೆಕಲ್ಲು ರಸ್ತೆಸಂಚಾರ ಸ್ಥಗಿತಗೊಂಡ ಘಟನೆ ಸಂಭವಿಸಿದೆ. ಏನೆಕಲ್ಲು ಬಳಿಯ ಬೂದಿಪಳ್ಳ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮೆಸ್ಕಾಂ ಮತ್ತು...
Loading posts...
All posts loaded
No more posts