ನಾಲ್ಕೂರು ಗ್ರಾಮದ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 𝟴𝟱𝟬 ವರ್ಷಗಳ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿರುವ ವಿಶೇಷ ದೇವರ ಮೀನುಗಳಿಗೆ (ನಾಗಕನ್ನಿಕೆಯರೆಂದು ಪ್ರತೀತಿ ) ನೀರಿನ ಒಳಹರಿವು ಕಡಿಮೆ ಇರುವುದನ್ನು ಅರಿತ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾ.𝟮𝟭 ರಂದು ನೀರಿಗೆ ಅಡ್ಡಲಾಗಿ ಕಟ್ಟ ನಿರ್ಮಾಣ ಮಾಡಿ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ನಾಲ್ಕೂರು ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್, ಸ್ವಯಂಸೇವಕರಾದ ನವೀನ್ ಕುಮಾರ್, ಕರುಣಾಕರ್, ಪ್ರಶಾಂತ್, ನಿಖಿಲ್ ಹುದೇರಿ, ರಂಜಿತ್ ಮರಕತ, ಹಾಗೂ ದೇವಸ್ಥಾನದ ಟ್ರಸ್ಟಿಗಳಾದ ಚಂದ್ರಶೇಖರ್ ಬಾಳುಗೋಡು, ಹರಿಪ್ರಸಾದ್ ಪುಣೇರಿ, ಹಾಗೂ ಸೇವಾ ಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಯಂಸೇವಕರಿಗೆ ದೇವಸ್ಥಾನದ ವತಿಯಿಂದ ಚಹಾ, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಯಿತು.
ವರದಿ:-ಉಲ್ಲಾಸ್ ಕಜ್ಜೋಡಿ