ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆಯ ದ್ವಾರದ ಬಳಿ ತಾ.ಪಂ. ಅನುದಾನದಲ್ಲಿ 1 ಲಕ್ಷ ರೂ ವೆಚ್ಚದಲ್ಲಿ ಸೋಲಾರ್ ಹೈಮಾಸ್ಟ್ ದೀಪ ಉದ್ಘಾಟನೆ ಮಾ.12 ರಂದು ನಡೆಯಿತು. ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಇದರ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉದಯಕುಮಾರ್ ಬಾನಡ್ಕ, ರಾಧಾಕೃಷ್ಣ ಪೂಜಾರಿಮನೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್ ನೆಕ್ರಾಜೆ, ವೆಂಕಟೇಶ ಕಾರಂತ, ಕಾರ್ಯಪ್ಪ ಗೌಡ ಪಿ.ಎಸ್., ಮೋಹಿತ್ ಜೇನುಕೋಡಿ, ದಿನೇಶ, ಜಗದೀಶ ಸಂಕಡ್ಕ, ಲಕ್ಷ್ಮೀನಾರಾಯಣ ಉಡುದೋಳಿ, ಮಹೇಶ್, ರವಿ, ಕಿರಣ್, ಕುಸುಮಾಧರ, ಗಿರೀಶ್ ಪದ್ನಡ್ಕ, ಮೋಹನಕುಮಾರ್ ಕೆ., ಪಂಚಾಯತ್ ಕಾರ್ಯದರ್ಶಿ ಡಿ.ಮೋನಪ್ಪ, ಶ್ರೀಮತಿ ಕವಿತಾ ಶಿವರಾಮ, ಪುಟ್ಟಣ್ಣ, ಆರ್.ಕೆ.ದೇವರಾಜ್, ವೆಂಕಪ್ಪ ಬಿ., ಸುಬ್ಬಪ್ಪ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Sunday
- November 24th, 2024