ಮಹಿಳೆಯರ ಸ್ವಾವಲಂಬನೆ ಯ ಪರಿಕಲ್ಪನೆಯ ಉದ್ದೇಶದಿಂದ ರೂಪಿತಗೊಂಡಿರುವ ಸಂಜೀವಿನಿ ಸ್ವಸಹಾಯ ಸಂಘ ಗ್ರಾಮೀಣ ಮಹಿಳೆಯರ ಆರ್ಥಿಕ ಬದುಕನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಪ್ರತಿ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸ್ವ-ಉದ್ಯೋಗದ ಮೂಲಕ ಗ್ರಾಮೀಣ ಮಹಿಳೆಯರು ತಾವೆ ಸ್ವ ಪ್ರೇರಣೆ ಯಿಂದ ಗುಂಪಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಗುತ್ತಿಗಾರು ಸಿದ್ಧಿದಾತ್ರಿ ಸಂಜೀವಿನಿ ಸಂಘವು ಮಾ 05 ರಂದು ಆರಂಭಗೊಂಡಿತು. 12 ಸದಸ್ಯರ ತಂಡದಲ್ಲಿ ಅಧ್ಯಕ್ಷರಾಗಿ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಕಾರ್ಯದರ್ಶಿಯಾಗಿ ಕು.ಪವಿತ್ರ ತುಪ್ಪದಮನೆ ಇವರುಗಳು ಆಯ್ಕೆಗೊಂಡರು. ಸದಸ್ಯರಾಗಿ ಅಕ್ಷತ ಪಿ, ರೂಪ, ಜಿ.ಸುಶೀಲ, ನೆಬಿಸಾ ಕೆ, ಪವಿತ್ರ ಕೆ, ಮನಸ್ವಿ ಜಿ.ವಿ, ಭವ್ಯ ಜೆ, ಭವಾನಿ ಬಿ.ಎನ್, ಶೋಬಾ, ಸಿಂಚನ ಟಿ.ಪಿ. ಸದಸ್ಯರಾಗಿ ಭಾಗವಹಿಸಿದ್ದರು. ಸಂಜೀವಿನಿ ಸಂಘದ ಗುತ್ತಿಗಾರು ಮೇಲ್ವಿಚಾರಕಿ ಶ್ರೀಮತಿ ಮಿತ್ರಕುಮಾರಿ ಚಿಕ್ಮುಳಿ ಸಂಘದ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ದಿವ್ಯ ಚತ್ರಪ್ಪಾಡಿ ಉಪಸ್ಥಿತರಿದ್ದರು.
*✍ವರದಿ:-ಉಲ್ಲಾಸ್ ಕಜ್ಜೋಡಿ*