ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಜಯ ಕರ್ನಾಟಕ ಪತ್ರಿಕೆಯ ಆಯೋಜಿಸಿದ ವಿಕ ಜೋಡಿ ತಾರೆ ಕರ್ನಾಟಕದ ಬೆಸ್ಟ್ ಜೋಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ ಪೂರ್ಣಿಮಾ ಕೃಷ್ಣರಾಜ್ ದಂಪತಿಗಳನ್ನು ಮಾರ್ಚ್ 8 ರಂದು ಕೇರ್ಪಳದ ಅಂಗನವಾಡಿ ಶಾಲೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕರ್, ಸುಪ್ರೀತ್ ಮೋಂಟಡ್ಕ, ಮಂಜು ಮೇಸ್ತ್ರಿ ಕೇರ್ಪಳ, ಶಾಫಿ ಕುತ್ತಮೊಟ್ಟೆ, ಶ್ರೀಮತಿ ಲತಾ ಕೇರ್ಪಳ, ಸಾನ್ವಿ ಪಿ.ಎನ್., ಸುಮತಿ , ಅಂಗನವಾಡಿ ಟೀಚರ್ ಕವಿತಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಜೇತ ಕೃಷ್ಣರಾಜ್ ಹಾಗೂ ಪೂರ್ಣಿಮಾ ಕೃಷ್ಣರಾಜ್ ಅನುಭವನ್ನು ಹಂಚಿಕೊಂಡರು
ಕವಿತಾ ಸ್ವಾಗತಿಸಿ, ರಿಯಾಜ್ ಕಟ್ಟೆಕಾರ್ ವಂದಿಸಿದರು.
- Thursday
- November 21st, 2024