Ad Widget

ಸತೀಶ್ ಬದುಕಿಗೆ ಬೆಳಕು ನೀಡೋಣ


ಸುಳ್ಯ ಯುವ ಬ್ರಿಗೇಡ್ ಘಟಕದ ಸಕ್ರಿಯ ಕಾರ್ಯಕರ್ತನಾಗಿದ್ದ ಸತೀಶ್ ಕುಮಾರ್ (ಸತೀಶ ಪರಿವಾರಕಾನ) ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು ಸಹೃದಯಿ ಬಂಧುಗಳು ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ.
ಸುಳ್ಯ ಕಸಬಾ ಪರಿವಾರಕಾನದ ಬಾಲಕೃಷ್ಣ ನಾಯ್ಕ್ ಮತ್ತು ಸರೋಜಿನಿ ದಂಪತಿಯ ಪುತ್ರ ಸತೀಶ್ ಕುಮಾರ್ ಪಿಬಿ ವಯಸ್ಸು 33 ಕಳೆದ 2-3 ವರ್ಷಗಳಿಂದ ತನ್ನ ಕೆಲಸ ಕಾರ್ಯಗಳ ಜೊತೆಗೆ ಸಮಾಜಮುಖಿ ಸೇವಾಕಾರ್ಯಗಳಲ್ಲಿ ಯುವ ಬ್ರಿಗೇಡ್ ನೊಂದಿಗೆ ಕೈಜೋಡಿಸಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರತನಾಗಿದ್ದ, ಸತೀಶ ತಾನು ಒಂದುವರೆ ವರ್ಷ ಪ್ರಾಯದವನಾಗಿದ್ದಾಗ ಮೂತ್ರಪಿಂಡದಲ್ಲಿ ಗೆಡ್ಡೆ ಕಾಣಿಸಿಕೊಂಡ ಕಾರಣ ಶಸ್ತ್ರಚಿಕಿತ್ಸೆಯ ಮುಖಾಂತರ ಮೂತ್ರಪಿಂಡ ಒಂದನ್ನು ಕಳೆದುಕೊಂಡಿರುತ್ತಾನೆ. ಬಡತನದಲ್ಲಿ ಬೆಳೆದವನಾದರೂ ಡಿಪ್ಲೋಮೋದ ವರೆಗಿನ ವಿದ್ಯಾಭ್ಯಾಸವನ್ನು ಮಾಡಿ ಕಳೆದ ನಾಲ್ಕೈದು ವರ್ಷಗಳ ಕಾಲ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿರುತ್ತಾನೆ. ಇಲ್ಲಿಯವರೆಗಿನ ಬದುಕು ಬಡತನ ವಾದರೂ ನಿಭಾಯಿಸಿಕೊಂಡು ಬಂದಿರುತ್ತಾನೆ ಆದರೆ ಈಗ ಕಳೆದೊಂದು ವರ್ಷದಿಂದ ಮತ್ತೊಂದು ಮೂತ್ರಪಿಂಡವು ವೈಫಲ್ಯ ವಾಗಿರುವುದರಿಂದ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ತಂದೆ-ತಾಯಿ ಮತ್ತು ಮನೆಯ ಜವಾಬ್ದಾರಿಯಿಂದಾಗಿ ತನ್ನ ಸಂಪಾದನೆಯ ಬಹುಭಾಗವನ್ನು ವ್ಯಯಿಸಿ ಈಗ ಡಯಾಲಿಸಿಸ್ ಹಂತದಲ್ಲಿ ಉಳಿಕೆ ಹಣ ವ್ಯಯವಾಗಿರುತ್ತದೆ.
ಯುವ ಬ್ರಿಗೇಡ್ ಸುಳ್ಯ ಘಟಕವು ತನ್ನ ಎಲ್ಲಾ ಸದಸ್ಯರೊಂದಿಗೆ ಜೊತೆಗೂಡಿ ನಿಮ್ಮ ಸಹಾಯ ಹಸ್ತ ಅಪೇಕ್ಷಿಸುತ್ತಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿರುವುದರಿಂದ ಸುಮಾರು ಹತ್ತು ಲಕ್ಷ ರೂಪಾಯಿಗಳ ಅವಶ್ಯಕತೆ ಇದ್ದು, ಸತೀಶ ಪರಿವಾರಕಾನ ಇವರ ತಾಯಿ ಮೂತ್ರಪಿಂಡ ದಾನಮಾಡಲು ಮುಂದಾಗಿರುತ್ತಾರೆ. ಬಡತನದಲ್ಲಿರುವ ಈ ಕುಟುಂಬದ ಆದಾಯವು ಮನೆ ಖರ್ಚು ನಿಭಾಯಿಸಲು ಕಷ್ಟವಾಗಿರುತ್ತದೆ. ಈ ಸಂದರ್ಭದಲ್ಲಿ ಭರವಸೆಯ ಬದುಕಿಗೆ ನಾವು ಬೆಳಕಾಗೋಣ.
ನೆರವು ನೀಡುವವರು
SATHEESH KUMAR P B
AC/No:599102010004530
IFSC CODE:UBIN0559911
ಹೆಚ್ಚಿನ ಮಾಹಿತಿಗಾಗಿ:
9945375534
9686893808
9448869799

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading