ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಐನೆಕಿದು ನವಜೀವನ ಸಮಿತಿಯ ವತಿಯಿಂದ ಪ್ರತೀ ತಿಂಗಳು ನಡೆಯುವ ಭಜನಾ ಕಾರ್ಯಕ್ರಮವು ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳಿಂದ ಜರುಗದೇ ಇದ್ದು ಇಂದು ಐನೆಕಿದು ನವಗ್ರಾಮದ ಜಲನಯನದ ಕಟ್ಟಡದಲ್ಲಿ ಭಜನಾ ಕಾರ್ಯಕ್ರಮವು ಜರುಗಿತು. ಮನೆ ಮನೆ ಭಜನೆ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆ ಯು ರಾಷ್ಟ್ರೀಯ ಸ್ವಯಸೇವಕ ಸಂಘ ಹಾಗೂ ನವಜೀವನ ಸಮಿತಿ ಯ ಒಟ್ಟು ಸೇರಿಕೆ ಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಸುಬ್ರಹ್ಮಣ್ಯ ವಲಯದ ಸಂಯೋಜಕರಾದ ಸತೀಶ್.ಟಿ.ಎನ್, ಮಣಿಕಂಠ ಕಟ್ಟ ಹಾಗೂ ಸದಸ್ಯರಾದ ಚಂದ್ರಶೇಖರ ಕೋನಡ್ಕ, ಐನೆಕಿದು ಸೇವಾಪ್ರತಿನಿಧಿ ಹರ್ಷಿತಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಬ್ರಹ್ಮಣ್ಯದ ಅದ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಹರಿಹರ ಪಲ್ಲತ್ತಡ್ಕ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅದ್ಯಕ್ಷರಾದ ಬಾಲಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ, ಲಲಿತಾ ಗುಂಡಡ್ಕ, ಭುಕ್ಷಿತ್ ನೀರ್ಪಾಡಿ, ರಾಮಕೃಷ್ಣ ನೆತ್ತಾರ ಹಾಗೂ ಭಕ್ತವೃಂದದವರು ಹಾಜರಿದ್ದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪಂಚಾಯತ್ ನ ನಿಯೋಜಿತ ಅದ್ಯಕ್ಷೆಯಾದ ಲಲಿತಾ ಗುಂಡಡ್ಕ ಇವರು ಸಿಹಿತಿಂಡಿ ವಿತರಣೆ ಮಾಡಿದರು. ಹಾಗೂ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
✍ವರದಿ:-ಉಲ್ಲಾಸ್ ಕಜ್ಜೋಡಿ