ಭಾರತೀಯ ಭೂ ಸೇನೆಯಲ್ಲಿ 17 ವರ್ಷಗಳ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿರುವ ಸತೀಶ್ ಜಾಲುಮನೆ ಜ. 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ಕೊಲ್ಲಮೊಗ್ರದ ಚಿನ್ನಪ್ಪ ಗೌಡ ಜಾಲುಮನೆ ಮತ್ತು ಭವಾನಿ ದಂಪತಿಗಳ ಪುತ್ರರಾದ ಸತೀಶ್ ಜಾಲುಮನೆಯವರು 2004 ರಲ್ಲಿ ಸೇನೆಗೆ ಸೇರಿ ದೇಶ ಸೇವೆ ಆರಂಭಿಸಿದ್ದರು. ಜಮ್ಮುಕಾಶ್ಮೀರ, ಉದಂಪುರ, ಶ್ರೀನಗರ, ಉತ್ತರ ಪ್ರದೇಶ, ಜಾನ್ಸಿ, ಪಂಜಾಬ್, ಕಲ್ಕ, ಸಿಕ್ಕಿಂ, ಪಶ್ಚಿಮ ಬಂಗಾಳ, ಸಿಕಂದರಾಬಾದ್, ರಾಜಸ್ತಾನ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ರಜನಿ ಸತೀಶ್, ಪುತ್ರಿ ಸಾನ್ವಿ ಜತೆ ನಿವೃತ್ತ ಜೀವನ ನಡೆಸಲಿದ್ದಾರೆ. ಸಹೋದರರಾದ ಜಯಪ್ರಕಾಶ್ ಅರಣ್ಯ ಇಲಾಖೆಯಲ್ಲಿ ಹಾಗೂ ದಯಾನಂದ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.