ಈ ಜೀವನಾ ಒಂದು ಯಾತ್ರೆಯೋ
ಪ್ರತೀ ದಿನಾ ಇಲ್ಲಿ ಜಾತ್ರೆಯೋ…
ಮನಸ್ಸಲಿ ಏನೇನೋ ಯೋಚನೆ
ಪ್ರೀತಿಯೇ ಇಲ್ಲಿ ಸಂಪಾದನೆ
ನೋವನು ಮರೆಸೊ ಪ್ರೀತಿಯೋ
ಅಥವಾ ನೋವನು ಕೊಡುವ ಪ್ರೀತಿಯೋ…
ಇಂದು ಶಿಕ್ಷೆಯಾ ಕೊಡುವ ಮನುಜರು
ಮುಂದೆ ಅವರೆ ಶಿಕ್ಷೆಯ ಅನುಭವಿಸುವರು…
ಕಳೆದು ಹೋದ ಸಮಯವಂತೂ
ಮತ್ತೆ ಎಂದೂ ತಿರುಗಿ ಬಾರದು…
ನೀ ಮಾಡಿದ ಪಾಪ-ಪುಣ್ಯವಾ
ನೀ ಅನುಭವಿಸೋ ಕಾಲ ಬರುವುದು…
ನಿರೀಕ್ಷೆಯೂ ನಿರಂತರ…
ಇಲ್ಲಿ ಪ್ರತೀಕ್ಷೆಯೂ ನಿರಂತರ…
ಈ ಜೀವನಾ ಒಂದು ಯಾತ್ರೆಯೋ
ಪ್ರತೀ ದಿನಾ ಇಲ್ಲಿ ಜಾತ್ರೆಯೋ…
ಕೊನೆಗೊಂದಿನ ನಿನ್ನ ಶವ ಯಾತ್ರೆಯೋ…
*✍ಉಲ್ಲಾಸ್ ಕಜ್ಜೋಡಿ*