ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾದಿನ ಹಾಗೂ ವರ್ಷಾವಧಿ ಜಾತ್ರೋತ್ಸವ ಫೆ. 18 ರಿಂದ 20 ತನಕ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಮತ್ತು ರಕ್ತೇಶ್ವರಿ, ವನಶಾಸ್ತಾವು, ನಾಗದೇವರು, ಪರಿವಾರ ದೈವಗಳ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವ ಬ್ರಹ್ಮಶ್ರೀ ವಾಸುದೇವ ತಂತ್ರಿಗಳವರ ಮಾರ್ಗದರ್ಶನದಲ್ಲಿ ಜರುಗಲಿರುವುದು.
ಫೆ 12 ರಂದು ಬೆಳಿಗ್ಗೆ ಗಂಟೆ 8:30 ಕ್ಕೆ ಮಹೂರ್ತದ ಗೊನೆ ಕಡಿಯುವುದು. ಫೆ.18 ಪೂ. ಗಂಟೆ 10:30 ರಿಂದ ಹಸಿರುವಾಣಿ, ಪೂರ್ವಾಹ್ನ ಗಂಟೆ 11:30 ರಿಂದ ಉಗ್ರಾಣ ತುಂಬಿಸುವುದು, ಅಪರಾಹ್ನ ಗಂಟೆ 12:30 ರಿಂದ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 7:00 ರಿಂದ ಶ್ರೀ ದೇವರಿಗೆ ಮಹಾಪೂಜೆ ನಡೆಯಲಿದೆ. ಫೆ 19 ರಂದು ಪೂ. ಗಂಟೆ 9:00 ರಿಂದ ಸುಬ್ರಹ್ಮಣ್ಯ ಹವನದ ಸಂಕಲ್ಪ, ಗಣಪತಿ ಹವನ, ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಪರಿವಾರ ದೇವರಿಗೆ ತಂಬಿಲ, ಅಪರಾಹ್ನ ಗಂಟೆ 12:00 ರಿಂದ ಸುಬ್ರಹ್ಮಣ್ಯ ಹವನದ ಪೂರ್ಣಾಹುತಿ, ಮದ್ಯಾಹ್ನ ಗಂಟೆ 12:30 ರಿಂದ ಶ್ರೀ ದೇವರಿಗೆ ಮಹಾಪೂಜೆ ಮತ್ತು ಪಲ್ಲಪೂಜೆ, ಮದ್ಯಾಹ್ನ ಗಂಟೆ 1:00 ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಗಂಟೆ 6:00 ರಿಂದ ದೀಪಾರಾಧನೆ, ಸಂಜೆ ಗಂಟೆ 6:30ರಿಂದ ತಾಯಂಬಕ, ಸಂಜೆ ಗಂಟೆ 7:00 ರಿಂದ ಮಹಾಪೂಜೆ, ಶ್ರೀ ದೇವರ ಉತ್ಸವಬಲಿ, ಪಟ್ಟಣ ಸವಾರಿ, ನೃತ್ಯಬಲಿ, ವಸಂತಕಟ್ಟೆ ಪೂಜೆ, ಬೆಡಿ ಸೇವೆ, ಅನ್ನಸಂತರ್ಪಣೆ ನಡೆಯಲಿದೆ. ಫೆ 20 ರಂದು ಪೂ. ಗಂಟೆ 10:00 ರಿಂದ ಶ್ರೀ ದೇವರ ಉತ್ಸವಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ಸಂಜೆ ಗಂಟೆ 6:30ರಿಂದ ಅಯೋಧ್ಯೆ ಕರಸೇವಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 7:00 ರಿಂದ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ (ರಿ.) ವಿಜಯಕುಮಾರ್ ಕೋಡಿಯಾಲಬೈಲ್ ರಚಿಸಿ ನಿರ್ದೇಶಿಸಿರುವ “ಒರಿಯರ್ದೊರಿ ಅಸಲ್” ತುಳು ಹಾಸ್ಯ ನಾಟಕ ನಡೆಯಲಿದೆ.
✍ವರದಿ:ಉಲ್ಲಾಸ್ ಕಜ್ಜೋಡಿ