ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಮತ್ತು ಕಳಂಜ ಗ್ರಾಮ ಪಂಚಾಯತ್ ನ ಜಂಟಿ ಸಹಯೋಗದಲ್ಲಿ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರವು ಜ.23 ರಂದು ನಡೆಯಿತು. ಈ ಸಂದರ್ಭದಲ್ಲಿ ಕಳಂಜ ಪಶುಸಂಗೋಪನ ಇಲಾಖೆಯ ವೈದ್ಯರಾದ ಡಾ. ಮೇಘಶ್ರೀ, ಪರೀಕ್ಷಕರಾದ ವಿಶ್ವನಾಥ್, ಸಹಾಯಕರಾದ ಚಿದಾನಂದ, ಡಾ.ನಿತಿನ್ ಪ್ರಭು, ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ )ಪಶು ಆಸ್ಪತ್ರೆ ಸುಳ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕುಮಾರ್ ಕಿಲಂಗೋಡಿ, ಗ್ರಾಮ ಪಂಚಾಯತ್ ಸಿಬ್ಬಂದಿಯಾದ ಗಿರಿಧರ ಕೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 90 ನಾಯಿಗಳಿಗೆ ಉಚಿತ ಲಸಿಕೆ ನೀಡಲಾಗಿದೆ.
- Friday
- November 22nd, 2024