
ಸುಳ್ಯದ ಕೇರ್ಪಳದಲ್ಲಿ ಸುಮಾರು 5 ವರ್ಷದಿಂದ ನೆಲೆಸಿರುವ ಆನಂದ ಎಂಬವರ ಪತ್ನಿ ಚಂದ್ರಾವತಿ (49)ಎಂಬವರು ಜ.18 ರಂದು ಮನೆಯಿಂದ ಕಾಣೆಯಾಗಿದ್ದರು. ಮನೆಯವರು ಹುಡುಕಾಟ ಆರಂಭಿಸಿದಾಗ ಪರ್ಸ್ ಮತ್ತು ಮೊಬೈಲ್ ಪಯಸ್ವಿನಿ ಹೊಳೆಯ ಬದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಹೊಳೆಗೆ ಬಿದ್ದಿರಬಹುದೆಂದು ಶಂಕಿಸಲಾಗಿತ್ತು. ಹಾಗಾಗಿ ಪೋಲೀಸರು,ಅಗ್ನಿಶಾಮಕ ದಳದವರು,ಮುಳುಗು ತಜ್ಞರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ . ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಜ.19 ರಂದು ಮನೆಯವರು ನೀಡಿದ ಪೋಲೀಸ್ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.