ಸುಳ್ಯದ ಜೂನಿಯರ್ ಕಾಲೇಜು ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸುಳ್ಯದ ಜೂನಿಯರ್ ಕಾಲೇಜ್ ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಸುಳ್ಯದ ಆರ್ಟಿಐ ಕಾರ್ಯಕರ್ತ ಟಿ.ಎಂ. ಶಾರಿಕ್ ಆರೋಪ ಮಾಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಹೇಳುವ ಪ್ರಕಾರ ಕನಿಷ್ಠ ಐದು ಅಡಿ ಆಳದ ಗುಂಡಿಯಲ್ಲಿ ಈ ಕೇಬಲ್ ಅಳವಡಿಕೆ ಮಾಡಬೇಕಾಗುತ್ತದೆ. ಕೇಬಲ್ ಅಳವಡಿಸುವ ಸ್ಥಳದಲ್ಲೇ ನೀರಿನ ಪೈಪ್ಲೈನ್ ಸೇರಿದಂತೆ ಇತರ ಕೇಬಲ್ಗಳು ಇರಬಾರದು. ಆಕಸ್ಮಿಕವಾಗಿ ಇದ್ದಲ್ಲಿ ಅದಕ್ಕೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಐದು ಅಡಿ ಕೆಳಗಡೆ ಈ ಕೇಬಲ್ ಹಾಕಿದ ನಂತರ ಇದರ ಮೇಲೆ ಇಟ್ಟಿಗೆ, ಟೈಲ್ಸ್ ಅಳವಡಿಸಬೇಕಾಗುತ್ತದೆ. ಆದರೆ ಇಲ್ಲಿ ಕೇಬಲ್ ಸರಿಯಾದ ರೀತಿಯಲ್ಲಿ ಅಳವಡಿಕೆ ಮಾಡಲಾಗಿಲ್ಲ ಎಂದು ಡಿ.ಎಂ. ಶಾರಿಕ್ ಆರೋಪಿಸಿದ್ದಾರೆ.
ಒಡೆದು ಹೋಗಿರುವ ನೀರಿನ ಪೈಪ್ಗಳ ನಡುವೆ ಕೇಬಲ್ ಅಳವಡಿಕೆ ಮಾಡಿರುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ ದಿನಗಳಲ್ಲಿ ನೀರಿನ ಪೈಪ್ ಕೆಲಸ, ಓಎಫ್ಸಿ ಕೇಬಲ್ ದುರಸ್ತಿ ಕೆಲಸಕ್ಕಾಗಿ ಗುಂಡಿತೋಡಿದಲ್ಲಿ ಅಪಾಯ ಎದುರಾಗುವ ಸಂಭವ ಇದೆ ಅದ್ದರಿಂದ ಸೂಕ್ತ ಮುಂಜಾಗೃತ ಕ್ರಮ ಕೈಗೊಂಡು, ವೈಜ್ಞಾನಿಕವಾಗಿ ಕೇಬಲ್ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.
- Friday
- November 22nd, 2024