ಸಂಪಾಜೆ ಗ್ರಾಮದ ಪೊಲೀಸ್ ಹೊರ ಠಾಣೆ ಹತ್ತಿರ ಹಾಗೂ ಕಡೆಪಾಲ ಬಳಿ ಕಳೆದ ಕೆಲವು ದಿನಗಳಿಂದ ಕೋಳಿ ತ್ಯಾಜ್ಯ, ಊಟದ ತಟ್ಟೆ, ಪ್ಲಾಸ್ಟಿಕ್ ವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು. ತಕ್ಷಣ ಸ್ಪಂದಿಸಿದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಜಿ. ಕೆ ಹಮೀದ್ ನೇತೃತ್ವದಲ್ಲಿ ಸದಸ್ಯರಾದ ಹನೀಫ್ ಎಸ್.ಕೆ., ಮಾಜಿ ಸದಸ್ಯ ಹನೀಫ್ ಎ. ಕೆ., ಜಿಲ್ಲಾ ವಿಖಾಯ ಖಜಾಂಜಿ ತಾಜುದ್ದೀನ್ ಟರ್ಲಿ, ಸಾಮಾಜಿಕ ಕಾರ್ಯಕರ್ತ ರಿಯಾಜ್ ಕಲ್ಲುಗುಂಡಿ, ಬೋಜಪ್ಪ ಮೊದಲಾದವರು ಸೇರಿ ಸ್ವಚ್ಛಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಈ ಪ್ರದೇಶಗಳಲ್ಲಿ ಪ್ರವಾಸಿಗರು ಕೂಡ ವಾಹನ ನಿಲ್ಲಿಸಿ ಕಸ ಬೀಸಾಡುತ್ತಾರೆ. ಅಂತ ಪ್ರದೇಶಗಳಲ್ಲಿ ಸೂಚನ ಫಲಕಗಳನ್ನು ಅಳವಡಿಸಬೇಕು ಹಾಗೂ ರಸ್ತೆ ಬದಿ ಎಸೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- Friday
- November 22nd, 2024