ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ ಸ.ಸಂಘದ ಅಡಳಿತ ಮಂಡಳಿ ಚುನಾವಣೆಗೆ ಇಂದು ಮತದಾನ ನಡೆದು ಮತ ಎಣಿಕೆ ನಡೆಯುತ್ತಿದೆ. ಇಲ್ಲಿ ಬಿಜೆಪಿಯ ಸಹಕಾರ ಭಾರತಿ ಹಾಗೂ ಸ್ವಾಭಿಮಾನಿ ಬಿಜೆಪಿಯ ಸಹಕಾರ ಬಳಗದ ನಡುವೆ ಪ್ರಬಲ ಪೈಪೋಟಿ ನಡೆದಿತ್ತು.
ಸಹಕಾರಿ ಅಭ್ಯರ್ಥಿಯಾಗಿ ಹರೀಶ್ ಕಂಜಿಪಿಲಿ ಸ್ಪರ್ಧಿಸಿದ್ದ ಕ್ಷೇತ್ರಕ್ಕೆ ಸಹಕಾರ ಬಳಗದ ವತಿಯಿಂದ ಯಾವುದೇ ಅಭ್ಯರ್ಥಿ ಹಾಕಿರಲಿಲ್ಲ. ಅದ್ದರಿಂದ ಹರೀಶ್ ಕಂಜಿಪಿಲಿ ಅವಿರೋಧ ಆಯ್ಕೆಯಾಗಿದ್ದರು. ಉಳಿದ 12 ಕ್ಷೇತ್ರಗಳಿಗೆ ಚುನಾವಣೆ ನಡೆದು ಅದರಲ್ಲಿ 10 ಕ್ಷೇತ್ರಗಳನ್ನು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ನೇತೃತ್ವದ ಸಹಕಾರ ಬಳಗ ಗೆದ್ದುಕೊಂಡಿದೆ. ಎರಡು ಕ್ಷೇತ್ರಗಳನ್ನಷ್ಟೇ ಬಿಜೆಪಿಯ ಸಹಕಾರಿ ಭಾರತಿ ಸ್ವಂತ ಬಲದಲ್ಲಿ ಗೆಲ್ಲಲು ಶಕ್ತವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಸ್ವಾಭಿಮಾನಿ ಬಿಜೆಪಿ ಬೆಂಬಲಿತ ಸಹಕಾರ ಬಳಗದ ಸಾಮಾನ್ಯ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜಯಪ್ರಸಾದ್ ಸುಳ್ಳಿ 481 ದೇವಿಪ್ರಸಾದ್ ಸುಳ್ಳಿ 481, ಮಾಧವ ಗೌಡ ಸುಳ್ಳಿ 441, ವಿಷ್ಣು ಭಟ್ ಮೂಲೆತೋಟ 515, ಶುಭಕರ ನಾಯಕ್ ಬೊಳ್ಳಾಜೆ 477, ಸತ್ಯೇಶ್ ಕುಮಾರ್ ಚಂದ್ರೋಡಿ 419 ಮತ ಪಡೆದು ಗೆಲುವು ಸಾಧಿಸಿದ್ದಾರೆ . ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾದ ಗಣೇಶ ಭಟ್ ಹರ್ಲಡ್ಕ 335, ನಾರ್ಣಪ್ಪ ಗೌಡ ಸಿ.ಯಂ. ಚೆನ್ನಡ್ಕ 330, ಬೋಜಪ್ಪ ಗೌಡ ಹೆಚ್ ಹರ್ಲಡ್ಕ 363, ಮಹೇಶ್ ಗಟ್ಟಿಗಾರು 330, ಶಿವಕರ ಕಜೆ 330, ಸತೀಶ್ ಗುಡ್ಡನಮನೆ 361 ಮತ ಪಡೆದು ಪರಾಭವಗೊಂಡರು.
ಸಾಲಗಾರರಲ್ಲದ ಕ್ಷೇತ್ರದ ಸಹಕಾರ ಭಾರತಿ ಅಭ್ಯರ್ಥಿ ಹರ್ಷಿತ್ ಎ.ಟಿ. 76 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಸಹಕಾರ ಬಳಗದ ಚಂದ್ರ ದಾಸನಕಜೆ 38 ಮತ ಪಡೆದು ಪರಾಭವಗೊಂಡಿದ್ದಾರೆ. ಇಲ್ಲಿ 6 ಮತ ಅಸಿಂಧುವಾಗಿದೆ.
ಸಾಲಗಾರ ಕ್ಷೇತ್ರದ (ಪ.ಪಂಗಡ) ಸಹಕಾರ ಭಾರತಿ ಅಭ್ಯರ್ಥಿ ತೀರ್ಥಕುಮಾರ್ ಟಿ 430 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಸಹಕಾರ ಬಳಗದ ಚೇತನ ಕೆ 416 ಮತ ಪಡೆದು ಸೋಲು ಕಂಡಿದ್ದಾರೆ. ಇಲ್ಲಿ 17 ಮತ ಅಸಿಂಧುವಾಗಿದೆ
ಸಾಲಗಾತ ಕ್ಷೇತ್ರದ ( ಹಿಂದುಳಿದ ವರ್ಗ, ಪ್ರವರ್ಗ ಎ ) ಸಹಕಾರ ಬಳಗದ ಅಭ್ಯರ್ಥಿ ಉಮೇಶ್ ಕೆ 506 ಮತ ಪಡೆದು ಜಯ ಗಳಿಸಿದ್ದಾರೆ. ಸಹಕಾರ ಭಾರತಿಯ ಮನಮೋಹನ ಎ.ಕೆ. 342 ಮತ ಪಡೆದು ಪರಾಭವಗೊಂಡರು. 15 ಮತ ಅಸಿಂಧುವಾಗಿದೆ.
ಸಾಲಗಾರ ಕ್ಷೇತ್ರದ ಮಹಿಳಾ ಮೀಸಲು ಕ್ಷೇತ್ರದಿಂದ ಸಹಕಾರ ಬಳಗದ ಸಂಧ್ಯಾ ಕೆ.ಎಲ್ 480, ಇಂದಿರಾ ಕೆ. 453 ಮತ ಪಡೆದು ಗೆಲುವು ಕಂಡರು. ಸಹಕಾರ ಭಾರತಿಯ ಪವಿತ್ರ 378, ಲಾಂಛನ ಕೆ.ಜೆ. 321 ಮತ ಪಡೆದು ಸೋಲು ಕಂಡಿದ್ದಾರೆ.
ಸಾಲಗಾರ ಕ್ಷೇತ್ರದ (ಪರಿಶಿಷ್ಟ ಜಾತಿ ಮೀಸಲು) ಸಹಕಾರ ಬಳಗದ ಅಭ್ಯರ್ಥಿ ಹರೀಶ್ ಸುಳ್ಳಿ 452 ಮತ ಪಡೆದು ಗೆಲುವು ಕಂಡಿದ್ದಾರೆ. ಸಹಕಾರ ಭಾರತಿಯ ಬಾಬು ಎಸ್ 361ಮತ ಪಡೆದು ಸೋಲು ಕಂಡಿದ್ದಾರೆ. 49 ಮತ ಅಸಿಂಧುವಾಗಿದೆ.
ಸಹಕಾರ ಬಳಗ 10 ಮತ್ತು ಸಹಕಾರ ಭಾರತಿ ಅವಿರೋಧ ಸೇರಿದಂತೆ 3 ಸ್ಥಾನ ಪಡೆದುಕೊಂಡಿದೆ.