Ad Widget

ನಿಸರ್ಗ ಯುವಕ ಮಂಡಲದ ಮಹಾಸಭೆ – ಅಧ್ಯಕ್ಷ ಲಕ್ಷ್ಮೀಶ್ ಇಜಿನಡ್ಕ , ಕಾರ್ಯದರ್ಶಿ ವಿನಯ್ ಅಂಙಣ


ನಿಸರ್ಗ ಯುವಕ ಮಂಡಲದ 2020-2021ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮ ಜ.10 ರಂದು ಐನೆಕಿದು ಶಾಲಾ ವಠಾರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶಶಿಧರ್ ಕತ್ತಿಮಜಲ್ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಸದಸ್ಯರಾದ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ, ಲಲಿತಾ ಗುಂಡಡ್ಕ, ಐನೆಕಿದು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯರಾಮ್ ಕಟ್ರಮನೆ ಯುವಕ ಮಂಡಲದ ನಿಯೋಜಿತ ಅಧ್ಯಕ್ಷ ಲಕ್ಷ್ಮೀಶ್ ಇಜಿನಡ್ಕ ಉಪಸ್ಥಿತರಿದ್ದರು. ಯುವಕ ಮಂಡಲದ ವಾರ್ಷಿಕ ವರದಿಯನ್ನು ಪೃಥ್ವಿ ರಾಜ್ ಕೆದಿಲ ಮಂಡಿಸಿದರು.

. . . . . . . . .


ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಲಕ್ಷ್ಮೀಶ್ ಇಜಿನಡ್ಕ , ಉಪಾಧ್ಯಕ್ಷರಾಗಿ ಕುಸುಮಾಧರ ಕಣ್ಕಲ್, ಕಾರ್ಯದರ್ಶಿಯಾಗಿ ವಿನಯ್ ಅಂಙಣ, ಜೊತೆ ಕಾರ್ಯದರ್ಶಿಯಾಗಿ ವಿನ್ಯಾಸ್ ವಾಡ್ಯಪ್ಪನಮನೆ, ಕೋಶಾಧಿಕಾರಿಯಾಗಿ ಪ್ರಕಾಶ್ .ಟಿ ನಿರ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ವಿಘ್ನೇಶ್ವರ ನವಗ್ರಾಮ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿವಕುಮಾರ್ ಪೈಲಾಜೆ ಆಯ್ಕೆಯಾದರು.ಯುವಕ ಮಂಡಲದ ಅಧ್ಯಕ್ಷ ಶಶಿಧರ್ ಕತ್ತಿಮಜಲ್ ಅವರು ನಿಯೋಜಿತ ಅಧ್ಯಕ್ಷ ಲಕ್ಷ್ಮೀಶ್ ಇಜಿನಡ್ಕ ಅವರಿಗೆ ಲೆಕ್ಕಪತ್ರ ಹಸ್ತಾಂತರಿಸಿದರು.ಅಜಿತ್ ಕಲ್ಲೇರಿ ಸ್ವಾಗತಿಸಿ, ವಿನಯ್ ಅಂಙಣ ವಂದಿಸಿದರು. ಧನುಷ್ ಕೋಟೆ ಬೈಲ್ ನಿರೂಪಿಸಿದರು. ಪದಗ್ರಹಣ ಕಾರ್ಯಕ್ರಮದಲ್ಲಿ ನಿಸರ್ಗ ಯುವಕ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದರು.
✍ವರದಿ:-ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading