ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಘಟಕದ ವತಿಯಿಂದ ಇಂದು ಕೆವಿಜಿ ಜಂಕ್ಷನ್ ಬಳಿಯಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಾಸವಿ ಕಲಾ ಸಾಹಿತ್ಯ ಸಂಘದ ಅಧ್ಯಕ್ಷೆ ಡಾ| ವೀಣಾರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಡಾ| ವೀಣಾರವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡುತ್ತಾ “ವಿದ್ಯಾರ್ಥಿ ಬದುಕಿನಲ್ಲಿ ವಿವೇಕಾನಂದರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡರೆ ಅದ್ಭುತ ಯಶಸ್ಸು ಸಾಧ್ಯ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಕೆವಿಜಿ ದಂತ ವೈದ್ಯ ಕಾಲೇಜಿನ ಉಪನ್ಯಾಸಕ ಡಾ| ಮನೋಜ್ ಅಡ್ಡಂತಡ್ಕ, ಸುಳ್ಯ ಸಿ.ಎ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸುದರ್ಶನ್ ಸೂರ್ತಿಲ, ಕೆವಿಜಿ ತಾಂತ್ರಿಕ ವಿದ್ಯಾಲಯದ ಸಿವಿಲ್ ವಿಭಾಗದ ಉಪನ್ಯಾಸಕ ಮುಖ್ಯಸ್ಥ ಚಂದ್ರಶೇಖರ್, ಎಬಿವಿಪಿ ನಗರ ಅಧ್ಯಕ್ಷರಾದ ಕುಲದೀಪ್ ಪೆಲಡ್ಕ, ಎಬಿವಿಪಿ ನಗರ ಉಪಾಧ್ಯಕ್ಷ ಪದ್ಮ ಕುಮಾರ್, ಎಬಿವಿಪಿ ನಗರ ಕಾರ್ಯದರ್ಶಿ ರುಚಿರ್ ರೈ, ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮತ್ತು ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಕುಮಾರಿ ಭವ್ಯಾ, ಎಬಿವಿಪಿ ನಗರ ಸಂಚಾಲಕ ಧನ್ಯರಾಜ್ ಕಾಪುಮಲೆ, ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ನಗರ ಎಬಿವಿಪಿ ವಿವಿಧ ಕಾಲೇಜು ಘಟಕಗಳ ಪದಾಧಿಕಾರಿಗಳಾದ ಕಾರ್ತಿಕ್, ಭರತ್, ಚರಣ್, ಸಿಂಚನಾ, ಪ್ರಸನ್ನ, ಶ್ರೀನಿಧಿ, ಧನ್ಯಶ್ರೀ ಮತ್ತು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು. ಎಬಿವಿಪಿ ನಗರ ಸಹ ಕಾರ್ಯದರ್ಶಿ ರವೀಶ್ ಕೇವಳ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಗರ ಎಬಿವಿಪಿ ವೃತ್ತಿ ಶಿಕ್ಷಣ ಪ್ರಮುಖ್ ವಿಪಿನ್ ಎಸ್. ವಂದಿಸಿದರು.