ಮಾವಿನಕಟ್ಟೆ ರಬ್ಬರ್ ಉತ್ಪಾದಕರ ಸಂಘದ ವತಿಯಿಂದ ರಬ್ಬರ್ ಬೋರ್ಡ್ ಸಹಯೋಗದೊಂದಿಗೆ ನಡೆದ ಟ್ಯಾಪಿಂಗ್ ತರಬೇತಿ ಶಿಬಿರದ ಸಮಾರೋಪ ಡಿ.30 ರಂದು ನಡೆಯಿತು. ಡಿ. 21 ರಿಂದ 8 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ 18 ರಬ್ಬರ್ ಬೆಳೆಗಾರರಿಗೆ ರಬ್ಬರ್ ಟ್ಯಾಪಿಂಗ್ ಬಗ್ಗೆ ಕೌಶಲ್ಯ ತರಬೇತಿ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ರಬ್ಬರ್ ಬೋರ್ಡ್ ನ ಪುತ್ತೂರು ವಿಭಾಗದ ರಬ್ಬರ್ ಉತ್ಪಾದನಾ ಅಸಿಸ್ಟೆಂಟ್ ಕಮಿಷನರ್ ಚಂದ್ರನ್ ಕರತ, ಮಾವಿನಕಟ್ಟೆ ರ.ಬೆ.ಸಂಘದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ನಿರ್ದೇಶಕ ಕೃಷ್ಣಪ್ಪ ಗೌಡ ಮಾವಿನಕಟ್ಟೆ ಹಾಗೂ ರಬ್ಬರ್ ಬೆಳೆಗಾರರು ಉಪಸ್ಥಿತರಿದ್ದರು. ತರಬೇತಿ ಪಡೆದವರಿಗೆ ಪ್ರಮಾಣಪತ್ರ ನೀಡಲಾಯಿತು. ಟ್ಯಾಪಿಂಗ್ ತರಬೇತುದಾರರಾಗಿ ಆಗಮಿಸಿದ ಚೊಕ್ಕಲಿಂಗಂ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
- Thursday
- November 21st, 2024