ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ವಿಜಯೋತ್ಸವದ ಅಂಗವಾಗಿ ಮುಖ್ಯ ಪೇಟೆಯಲ್ಲಿ ಮೆರವಣಿಗೆ, ಸಿಂಗಾರಿ ಮೇಳದವರಿಂದ ಆಕರ್ಷಕ ಪ್ರದರ್ಶನ ನಡೆಯಿತು. ಮೆರವಣಿಗೆ ಮಾಜಿ ಕೆಪಿಸಿಸಿ ಸದಸ್ಯ, ಕೊಡಗು ಉಸ್ತುವಾರಿ ವೆಂಕಪ್ಪ ಗೌಡ ಚಾಲನೆ ನೀಡಿದರು. ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸೋಮಶೇಖರ್ ಕೊಯಿಂಗಾಜೆ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಆರಂತೋಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿಜೇತರಾದ ಅಲೆಟ್ಟಿ, ಉಬರಡ್ಕ,ಮರ್ಕಂಜ, ಆರಂತೋಡು, ಸಂಪಾಜೆ, ನಾಪೋಕ್ಲು ವ್ಯಾಪ್ತಿಯ ಚೆಂಬು,ಪೆರಾಜೆ , ಸಂಪಾಜೆ, ಮದೆ, ನಾಪೋಕ್ಲು ಗ್ರಾಮದ ಸದಸ್ಯರುಗಳನ್ನು ಅಭಿನಂದಿಸಲಾಯಿತು ,ವೆಂಕಪ್ಪಗೌಡ ಅಭಿನಂದನಾ ಬಾಷಣ ಮಾಡಿದರು. ಅಭಿನಂದನೆ ಸ್ವೀಕರಿಸಿ ಸದಸ್ಯರುಗಳ ಪರವಾಗಿ ಹಮೀದ್.ಜಿ. ಕೆ. ಮಾತನಾಡಿದರು ಕೆಪಿಸಿಸಿ ಯ ಟಿ. ಪಿ ರಮೇಶ್ ಮಾತನಾಡಿ ಗ್ರಾಮ ಮಟ್ಟದಲ್ಲಿ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಭಾವನೆಗಳಿಗೆ ಸ್ಪಂದಿಸಲು ಕರೆ ನೀಡಿದರು. ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಕೊಡಗಿನ ಕಾಂಗ್ರೆಸ್ ಪಕ್ಷದ ಸಂಘಟನೆ ಆಗುತ್ತಿದೆ. ಬಹುತೇಕ ಕಡೆ ಪಕ್ಷದ ಸದಸ್ಯರು ವಿಜೇತರಾಗಿ ಇನ್ನಷ್ಟು ಪಕ್ಷ ಕಟ್ಟಲು ಅವಕಾಶ ಆಗಿದೆ ನಾಪೋಕ್ಲು ನಲ್ಲಿ ಅಧಿಕಾರಕ್ಕೆ ಬಂದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಸುರಯ್ಯ ಅಬ್ರಾಹರ್, ಸುಳ್ಯ ವಿಧಾನಸಭಾ ಉಸ್ತುವಾರಿ ಕೃಷ್ಣಪ್ಪ, ಗಂಗಾಧರ್ ಪಿ. ಎಸ್. ಯಮುನಾ,ಸುಂದರಿ, ಸೂರಜ್ ಹೊಸೂರು, ರವಿರಾಜ್ ಹೊಸೂರು ಉಪಸ್ಥಿತರಿದ್ದರು. ದಿಕ್ಸೂಚಿ ಭಾಷಣ ಮಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ ನಿಕೇತ್ ರಾಜ್ ಮೌರ್ಯ ಕಾಂಗ್ರೆಸ್ ಪಕ್ಷದ ಇತಿಹಾಸ ನೆಹರು ,ಮನಮೋಹನ್ ರವರ ಉತ್ತಮ ಆಡಳಿತ, ಸಾಧನೆ, ಆರ್ಥಿಕ ನೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈಗಿನ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸದೇ ಯುವ ಜನಾಂಗ ಎತ್ತ ಸಾಗುತ್ತಿದೆ, ಯುವ ಜನತೆಗೆ ಕೈಯಲ್ಲಿ ಉದ್ಯೋಗ ಕೊಡಬೇಕಾಗಿದೆ. ಆ ಮೂಲಕ ಒಂದು ಒಳ್ಳೆಯ ಸಮಾಜ ನಿರ್ಮಾಣ, ಭವ್ಯ ಜಾತ್ಯತೀತ ಬಲಿಷ್ಠ ಭಾರತ ಕಟ್ಟುವ ಅವಶ್ಯಕತೆ ಇದೆ, ಅದಕ್ಕಾಗಿ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡಿದರು. ವೇದಿಕೆಯಲ್ಲಿ ಜಗದೀಶ್ ರೈ ,ಲೂಕಾಸ್ ಉಪಸ್ಥಿತರಿದ್ದರು. ಮಹಮ್ಮದ್ ಕುಂಞ ಗೂನಡ್ಕ ಸ್ವಾಗತಿಸಿ , ಸೂರಜ್ ಹೊಸೂರು ವಂದಿಸಿದರು. ಸವಾದ್ ಗೂನಡ್ಕ ನಿರೂಪಿಸಿದರು.