ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ವಿಶ್ವನಾಥ್ ಕಮಿಲ ಡಿ.31 ಭೂಸೇನೆಯಿಂದ ನಿವೃತ್ತಿಯಾದರು. ತನ್ನ ವಿದ್ಯಾಭ್ಯಾಸವನ್ನು ಕಿರಿಯ ಪ್ರಾಥಮಿಕ ಶಾಲೆ ಕಮಿಲ ನಂತರ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಪ್ರೌಢಶಾಲೆ ಗುತ್ತಿಗಾರು ಮತ್ತು ಪಿಯುಸಿ ಯನ್ನು ಗುತ್ತಿಗಾರಿನಲ್ಲಿ ಮಾಡಿದ್ದಾರೆ. ಪಿ.ಯು.ಸಿ ಓದುತ್ತಿರುವಾಗಲೇ ಭಾರತೀಯ ಸೇನೆಯಯಲ್ಲಿರುವ ಹುದ್ದೆಗಳಿಗೆ ಪ್ರಯತ್ನಿಸುತ್ತಿದ್ದರು. ಅದೇ ರೀತಿ ೨೦೦೩ರಂದು ತನ್ನ ಕಠಿಣ ಪರಿಶ್ರಮದಿಂದ ಭಾರತೀಯ ಭೂ ಸೇನೆಗೆ ಆಯ್ಕೆಗೊಂಡರು. ಅವರು ಸೇನೆಯ ಮೊದಲ ತರಬೇತಿಯನ್ನು ಪೊಲೀಸ್ ಗ್ರೌಂಡ್ ಮಡಿಕೇರಿಯಲ್ಲಿ ಪಡೆದು ಹೆಚ್ಚಿನ ತರಬೇತಿಯನ್ನು ನಾಸಿಕ್ ಗ್ರೌಂಡ್ ಮಹಾರಾಷ್ಟ್ರದಲ್ಲಿ ಪಡೆದಿದ್ದಾರೆ.
ಇವರು ೨೦೦೪ ರಿಂದ ಕರ್ತವ್ಯಕ್ಕೆ ಹಾಜರಾಗಿ ೨೦೦೭ರ ತನಕ ಜಮ್ಮು ಕಾಶ್ಮೀರದ ರಜೌರಿಯಲ್ಲಿ ಸೇವೆ ಸಲ್ಲಿಸಿದರು. ೨೦೦೭ರಿಂದ ೨೦೧೪ರವರೆಗೆ ಪಾಟ್ನ ಕೋಟ್, ಪಂಜಾಬ್‌ನಲ್ಲಿ, ೨೦೧೪ರಿಂದ ೨೦೧೫ ಸಿಯಾಚಿನ್ ಗ್ಲೇಸಿಯರ್, ೨೦೧೬ ರಿಂದ ೨೦೧೭ ಉತ್ತರಕಾಂಡದ ರಾಯವಾಲದಲ್ಲಿ, ೨೦೧೭ ರಿಂದ ೨೦೨೦ ಡಿ. ೧ ತನಕ ಪಶ್ಚಿಮ ಬಂಗಾಳದ ಸೊನೊಗಾಂಚಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಗ್ರಾಮದ ಕೊಡಕಜೆ, ಕಮಿಲ ದಿ.ಪರಮೇಶ್ವರ ಮತ್ತು ಕೆಂಚಮ್ಮ ದಂಪತಿಯ ಪುತ್ರ. ಅಣ್ಣಂದಿರಾದ ಹರೀಶ್.ಕೆ ಮತ್ತು ದುರ್ಗದಾಸ್.ಕೆ ಹಾಗೂ ಪತ್ನಿ ಶೀಲಾವತಿ, ೨ ವರ್ಷದ ಮಗು ಯಾನವಿ ಮತ್ತು ಅಭಿ.ಕೆ ಇವರುಗಳೊಂದಿಗೆ ನಿವೃತ್ತ ಜೀವನ ನಡೆಸಲಿದ್ದಾರೆ.
ವಿಶೇಷವಾಗಿ ಸ್ಪೋಟ್ಸ್ ಕೋಟಾದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರಿಗೆ ನೇರವಾಗಿ ಭಾರತೀಯ ಭೂ ಸೇನೆಗೆ ಸೇರಲು, ದೇಶ ಸೇವೆಗೆಯ್ಯಲು ತಯಾರಿರುವ ಯುವಕರಿಗೆ ಪ್ರೋತ್ಸಾಹ ಮುಖಾಂತರ ದೇಶ ಸೇವೆ ಮುಂದುವರೆಸುತ್ತೇನೆ ಎಂದಿದ್ದಾರೆ.
- Monday
- November 25th, 2024