Ad Widget

ಸುಬ್ರಹ್ಮಣ್ಯ : ಜೇಸಿರತ್ನ ಪುರಸ್ಕಾರಕ್ಕೆ ಭಾಜನರಾದ ಜೇಸಿ ರವಿ ಕಕ್ಕೆಪದವು

ಆರ್ಯಭಟ ಪ್ರಶಸ್ತಿ ಪುರಸ್ಕೃತ ಜೇಸಿ ರವಿ ಕಕ್ಕೆಪದವುರವರಿಗೆ 2020 ರ ಸಾಲಿನ ಜೇಸಿರತ್ನ ಪುರಸ್ಕಾರ ಲಭಿಸಿದೆ. ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿ ನೂರಾರು ಜನರಿಗೆ ಅನ್ನದಾತರಾಗಿರುವ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದು ಕಲಿಕಾ ಸಾಮಾಗ್ರಿಗಳನ್ನು ನೀಡುವುದು, ಅಶಕ್ತರಿಗೆ ಆರ್ಥಿಕ ನೆರವು, ಆಹಾರ ಸಾಮಾಗ್ರಿ ನೀಡುವುದು, ಅನಾರೋಗ್ಯ ಪೀಡಿತರ ಆರೈಕೆ, ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಕೊಡುಗೈದಾನಿಯಾಗಿ ಹಲವು ಗೌರವ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಸುಬ್ರಹ್ಮಣ್ಯದಲ್ಲಿ ನಿವೇಶನವನ್ನು ಖರೀದಿಸಿ ಪ್ರತೀ ವರ್ಷ ಒಂದು ಬಡ ಕುಟುಂಬಕ್ಕೆ ಮನೆ ನಿರ್ಮಸಿ ಕೊಡುತ್ತಿರುವ ಇವರು ಈ ವರೆಗೆ 9 ಬಡ ಕುಟುಂಬಗಳಿಗೆ ನೂತನ ಮನೆ ನಿರ್ಮಿಸಿಕೊಟ್ಟು ಬಡವರ ಬದುಕಿಗೆ ಬೆಳಕಾಗಿದ್ದಾರೆ. ಇಂತಹ ಪರೋಪಕಾರಿ ವ್ಯಕ್ತಿತ್ವಕ್ಕೆ ಅರ್ಹವಾಗಿಯೇ ಹಲವು ಪ್ರಶಸ್ತಿಗಳು ಲಭಿಸಿದ್ದು ಇದೀಗ ಜೇಸಿರತ್ನ ಪ್ರಶಸ್ತಿ ಲಭಿಸಿರುವುದು ಅವರ ಸಹಾಯಹಸ್ತದ ಹಿರಿತನಕ್ಕೆ ಸಿಕ್ಕ ಇನ್ನೊಂದು ಗರಿಯಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading