Ad Widget

ತೊಡಿಕಾನ ದೇವರಗುಂಡಿ ಸುತ್ತ ಬೇಲಿ‌ ಅಳವಡಿಕೆ – ಅನಾಚಾರ ನಡೆಯದಂತೆ ಆಡಳಿತ ಮಂಡಳಿ ಕ್ರಮ – ಇದು ಅಮರ ಸುದ್ದಿ ವರದಿಯ ಫಲಶ್ರುತಿ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೋಡಿಕಾನ ಮೂಲ ಸ್ಥಾನವಾದ ದೇವರ ಗುಂಡಿಯ ಪಾವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಂತಿ ಬೇಲಿಯನ್ನು. ಅಳವಡಿಸಲಾಗಿದೆ.

. . . . . . .

ಇತ್ತೀಚೆಗೆ ಈ ಸ್ಥಳದಲ್ಲಿ ಅಶ್ಲೀಲ ಪೋಟೋ, ವಿಡಿಯೋ ಶೂಟಿಂಗ್ ನಡೆದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಕಟಿಸಿತ್ತು. ಬಳಿಕ ಅದು ರಾಜ್ಯಮಟ್ಟದ ಸುದ್ದಿಯಾಗಿತ್ತು. ವಿಶ್ವ ಹಿಂದೂ ಪರಿಷತ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿತ್ತು. ಬಳಿಕ ಆಡಳಿತ ಮಂಡಳಿ ಸಭೆ ಕರೆದು ಇನ್ನೂ ಮುಂದೆ ಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯಬಾರದೆಂದು ತೀರ್ಮಾನಿಸಿತ್ತು. ಇಂದು ಆಡಳಿತ ಮಂಡಳಿ, ಹಿಂದೂ ಸಂಘಟನೆಯ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಸೇರಿ ದೇವರ ಗುಂಡಿಯ ಸುತ್ತ ತಂತಿಬೇಲಿ ಅಳವಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!