
ಮೊಗರ್ಪಣೆ ಇದಾಯತ್ ಉಲ್ ಇಸ್ಲಾಂ ಜಮಾಅತ್ ಕಮಿಟಿಯ ಮಹಾಸಭೆ ನವಂಬರ್ 27 ರಂದು ಮೊಗರ್ಪಣೆ ಮದರಸ ಸಭಾಂಗಣದಲ್ಲಿ ನಡೆದಿತ್ತು. ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆಗಳು ನಡೆದು ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ಹೆಸರನ್ನು ಸೂಚಿಸಲಾಗಿತ್ತು. ಆದರೆ ಒಮ್ಮತ ಬಾರದ ಕಾರಣ ಕೆಲವು ದಿನಗಳ ಬಳಿಕ ಅಧ್ಯಕ್ಷರ ಆಯ್ಕೆಗೆ ಸಭೆ ಕರೆಯುವಂತೆ ಆ ಸಭೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ತೀರ್ಮಾನಿಸಿ ಸಭೆಯನ್ನು ಕೊನೆ ಗೊಳಿಸಲಾಗಿತ್ತು. ಆದರೆ ಸ್ಥಳೀಯ ಪತ್ರಿಕೆಯಲ್ಲಿ ಹಾಜಿ ಇಬ್ರಾಹಿಮ್ ರವರನ್ನು ನವೆಂಬರ್ 29ರಂದು ಸಭೆಸೇರಿ ಆಯ್ಕೆ ಮಾಡಲಾಗಿದೆ ಎಂಬ ವಿಷಯ ಪ್ರಕಟಗೊಂಡಿದ್ದು ಈ ರೀತಿಯ ಘಟನೆಗಳು ನಡೆದೇ ಇಲ್ಲ, ಹಾಗೂ ಅಧ್ಯಕ್ಷರ ಆಯ್ಕೆ ಮಾಡಲಾಗಿಲ್ಲ ಎಂದು ಮೊಗರ್ಪಣೆ ಇದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ ಅಮರ ಸುದ್ದಿಗೆ ಮಾಹಿತಿಯನ್ನು ನೀಡಿರುತ್ತಾರೆ.