Ad Widget

ಚಿಗುರು ಅರೆಭಾಷೆ ಕವನ ಸ್ಪರ್ಧೆ ಫಲಿತಾಂಶ ಪ್ರಕಟ – ಲಿಖಿತಾ ಗುಡ್ಡೆಮನೆ ಪ್ರಥಮ

ಚಿಗುರು ಕ್ರೀಡಾ ಮತ್ತು ಕಲಾ ಯುವಕಮಂಡಲ ಪೆರಾಜೆ ಇವರ ಆಶ್ರಯದಲ್ಲಿ ನಡೆದ ಹುತ್ತರಿ ಮತ್ತು ದೀಪಾವಳಿ ಎಂಬ ವಿಷಯಗಳ ಕುರಿತ ಚಿಗುರು ಅರೆಭಾಷೆ ಕವನ ಸ್ಪರ್ಧೆ 2020ರ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಬಹುಮಾನ ವನ್ನು ಕುಮಾರಿ ಲಿಖಿತಾ ಗುಡ್ಡೆಮನೆಯವರ “ಹೂ ನರ್ಕುವ ಹಬ್ಬ” ಎಂಬ ಕವನ ಪಡೆದುಕೊಂಡಿದೆ, ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಕ್ರಮವಾಗಿ ಮನೋಜ್ ಕುಡೆಕಲ್ಲು ಬರೆದ “ಬೊಳ್ಪುನ ಹುಡ್ಕೆಂಡ್ ಹೇಳದೆ ಹೋದಂವ” ಮತ್ತು ಸಂಗೀತ ರವಿರಾಜ್ ಚೆಂಬುರವರ “ದೀಪಾವಳಿ ಮತ್ತೆ ನೆಂಪು” ಎಂಬ ಕವನಗಳು ಪಡೆದುಕೊಂಡಿವೆ.
ಕವನ ಸ್ಪರ್ಧೆಯ ತೀರ್ಪುಗಾರರಾಗಿ ಅರೆಭಾಷೆ ಬರಹಗಾರ ಡಾ.ಪುನೀತ್ ರಾಘವೇಂದ್ರ ಕುಂಟುಕಾಡು, ಕವಿ ಉದಯ ಭಾಸ್ಕರ ಸುಳ್ಯ, ಅರೆಭಾಷೆ ಕವಿ ಯತಿಶ್ಯಾಂ ಕುಂಬಳಚೇರಿ ಅವರು ಸಹಕರಿಸಿದರು.
ಹುತ್ತರಿ ಮತ್ತು ದೀಪಾವಳಿ ಎಂಬ ವಿಷಯಗಳ ಬಗ್ಗೆ ನಡೆದ ಕವನ ಸ್ಪರ್ಧೆಗಳಲ್ಲಿ ಬಂದ ಸುಮಾರು 25 ಕವನಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ಅವರಿಗೆ ಯುವಕಮಂಡಲದ ವತಿಯಿಂದ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದರು.
ಈ ಸಂದರ್ಭ ಚಿಗುರು ಯುವಕಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ, ಕಾರ್ಯದರ್ಶಿ ದಿವಾಕರ ಮಜಿಕೋಡಿ, ಸಂಘದ ಸಾಂಸ್ಕೃತಿಕ ಅಧ್ಯಕ್ಷ ಮಿಥುನ್ ಮಜಿಕೋಡಿ, ಕಾರ್ಯದರ್ಶಿ ಭವಿತ್ ಕುಂಬಳಚೇರಿ , ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ ಸೇರಿದಂತೆ ಯುವಕ ಮಂಡಲ ಪದಾಧಿಕಾರಿಗಳು, ಸದಸ್ಯರು ಇದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!