ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ 2020 ನೇ ಸಾಲಿನ ದೀಪಾವಳಿ ವಿಶೇಷಾಂಕದಲ್ಲಿ ಮುದ್ದು ಕಂದ ಫೋಟೋ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ಪುಟಾಣಿ ಮಕ್ಕಳ ಫೋಟೋಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಮೂವರು ಮಕ್ಕಳು ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ್ವಿತೀಯ ಬಹುಮಾನದ ಪ್ರಾಯೋಜಕರಾಗಿ ರಥಬೀದಿಲ್ಲಿ ಕಾರ್ಯಚರಿಸುತ್ತಿರುವ ಶಾಫಿ ಕುತ್ತಮೊಟ್ಟೆ ಮಾಲಕತ್ವದ ತಾಹಿರಾ ಫ್ಯಾಬ್ರಿಕ್ಸ್ ನಲ್ಲಿ ನ. 26ರಂದು ವಿಜೇತ ಮಗುವಿಗೆ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಕಲ್ಚರ್ಪೆ ಶ್ರೀ ವನದುರ್ಗ ದೇವಿ ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ. ಗೋಕುಲ್ ದಾಸ್, ರಾಜು ಪಂಡಿತ್, ಕೆ ಸುರೇಶ್ ಪಂಡಿತ್, ಹಿಂದುಸ್ತಾನ್ ಲಾಡ್ಜ್ ಮಾಲಕ ಹಮೀದ್ ಮಂಗಳೂರು, ಬುಶ್ರಾ ಶಾಫಿ, ಸ್ಥಳೀಯ ಉದ್ಯಮಿ ಮುಸ್ತಫ, ಸುಳ್ಯ ರೋಟರ್ಯಾಕ್ಟ್ ಅಧ್ಯಕ್ಷ ಶಹೀದ್ ಪಾರೆ, ಅಂಚೆ ಪಾಲಕ ಲೋಕೇಶ್ವರ, ದ್ವಿತೀಯ ಬಹುಮಾನ ವಿಜೇತ ನಿಧೀಶ್ ಕೆ, ಮಗುವಿನ ಪೋಷಕರಾದ ಬ್ರಿಜೇಶ್ ಕುದ್ಪಾಜೆ, ಮಮತಾ ಬ್ರಿಜೇಶ್, ಅಮರ ಸುಳ್ಯ ಸುದ್ದಿ ಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನಪಾರೆ, ಸಂಸ್ಥೆಯ ವ್ಯವಸ್ಥಾಪಕ ವಿಶ್ವನಾಥ ಮೋಟುಕಾನ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕೆ ಗೋಕುಲ್ ದಾಸ್ ರವರು ಮುದ್ದುಕಂದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಿಧೀಶ್ ರವರಿಗೆ ವೈಯಕ್ತಿಕ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.