ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿಯವರ ವರ್ಗಾವಣೆಯ ಅಧಿಕಾರ ಸ್ವೀಕರಿಸಿಕೊಂಡಿರುವ ಎಂ.ಆರ್ ಸ್ವಾಮಿಯವರು ನ.೨೫ರಂದು ಬೆಳಗ್ಗೆ ಸುಳ್ಯ ನಗರದ ಮುಖ್ಯರಸ್ತೆಯ ಕೆಲವು ತರಕಾರಿ ಮತ್ತು ಹಣ್ಣಿನ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿ ಅಂಗಡಿ ಮಾಲಕರು ತಮ್ಮ ಸಾಮಾಗ್ರಿಗಳನ್ನು ಸಾರ್ವಜನಿಕರು ನಡೆದಾಡುವ ಪುಟ್‌ಫಾತ್ ಗಳ ಮೇಲೆ ಇರಿಸಿ ವ್ಯಾಪಾರ ಮಾಡುತ್ತಿದ್ದವರನ್ನು ಗಮನಿಸಿ ಕೂಡಲೇ ಕಾರ್ಯಾಚರಣೆ ನಡೆಸಿ ಸ್ಥಳದಿಂದ ತೆರವುಗೊಳಿಸಿದರು.
ನಗರದ ಪುಟ್‌ಫಾತ್ ಗಳು ಸುಮಾರು ೮ ಅಡಿಗಳ ವಿಸ್ತಾರವನ್ನು ಹೊಂದಿದ್ದು, ಈ ಸ್ಥಳದಲ್ಲಿ ಕೇವಲ ಸಾರ್ವಜನಿಕರಿಗೆ ನಡೆದಾಡಲೂ ಮಾತ್ರ ಇರುವುದಾಗಿದೆ. ಆದರೆ ಕೆಲವು ಅಂಗಡಿ ಮಾಲಕರು ತಮ್ಮ ಅಂಗಡಿಯನ್ನು ವಿಸ್ತಾರಗೊಳಿಸಿ ಸಣ್ಣಪುಟ್ಟ ಕಟ್ಟೆಗಳನ್ನು ನಿರ್ಮಿಸಿ ಪುಟ್‌ಫಾತ್ ನ ಜಾಗವನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಸಾರ್ವಜನಿಕರು ರಸ್ತೆಗಳಲ್ಲಿ ನಡೆದಾಡುವ ಪರಿಸ್ಥಿತಿ ಏರ್ಪಟ್ಟಿದ್ದು, ಜನರಿಗೆ ವಾಹನ ಅಪಘಾತಗಳಾಗುವ ನಡೆಯುವ ಸಂಭವ ಹೆಚ್ಚಾಗಿದ್ದ ಕಾರಣ ಈ ರೀತಿಯ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ಪತ್ರಿಕೆಗೆ ಹೇಳಿಕೆಯನ್ನು ನೀಡಿದರು.
ಕೆಲವು ವಿಶಾಲ ಮಳಿಗೆಗಳು ಮೆಟ್ಟಿಲುಗಳನ್ನು ಪೂಟ್‌ಬಾತ್‌ನಲ್ಲಿ ನಿರ್ಮಿಸಿದ್ದು ಅವುಗಳನ್ನು ಕೂಡಾ ತೆರವುಗೊಳಿಸುವಂತೆ ಸಂಬಂಧಪಟ್ಟ ವ್ಯಾಪಾರಕೇಂದ್ರದ ಮಾಲಕರಿಗೆ ತಿಳಿರುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಯೋಜನೆಯಡಿಯಲ್ಲಿ ಬೀದಿ ವ್ಯಾಪಾರಿಗಳಿಗೆ ಸರಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ಬೀದಿ ವ್ಯಾಪಾರಿಗಳಿಗೆ ಮಾಹಿತಿಯನ್ನು ನೀಡಿ ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವ್ಯಾಪಾರಸ್ಥರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನ.ಪಂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.