ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿ ತನಗೆ ಬಂದಿರುವ ಕಠಿಣ ಪರಿಸ್ಥಿತಿ ಯನ್ನು ಎದುರಿಸಲು ಸಾಧ್ಯವಾಗದೇ ಇದ್ದಾಗ ಈ ಆತ್ಮಹತ್ಯೆ ಯ ದಾರಿ ಹಿಡಿಯುತ್ತಾನೆ. ಆದರೆ ಪ್ರತಿಯೊಬ್ಬರಿಗೂ ಒಂದು ವಿಷಯ ತಿಳಿದಿರಬೇಕು. ಅದೇನೆಂದರೆ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆ ಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ. ಬೀಗ ಇದೆ ಎಂದಾದ ಮೇಲೆ ಆ ಬೀಗವನ್ನು ತೆಗೆಯುವ ಕೀ ಕೂಡ ಇದ್ದೇ ಇರುತ್ತದೆ. ಅದೇ ರೀತಿ ಕಷ್ಟ ಬಂದಿದೆ ಎಂದಾದ ಮೇಲೆ ಆ ಕಷ್ಟದಿಂದ ಹೊರಬರುವ ಮಾರ್ಗವೂ ಇದ್ದೇ ಇರುತ್ತದೆ. ಪ್ರಯತ್ನ ಪಟ್ಟರೆ ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ.
ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಆ ಆತ್ಮಹತ್ಯೆ ಮಾಡಿಕೊಳ್ಳುವುದರ ಮೇಲೆ ತೋರುವ ಧೈರ್ಯವನ್ನು ಕಷ್ಟ ದಿಂದ ಹೊರಬರುವುದರ ಮೇಲೆ ತೋರಿಸಬೇಕು.
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ ಕಷ್ಟ ಬರುತ್ತಲೇ ಇರುತ್ತದೆ. ಹಾಗೆಂದು ಪ್ರತಿಯೊಬ್ಬರೂ ಆತ್ಮಹತ್ಯೆ ಯ ಯೋಚನೆ ಮಾಡಿದರೆ ಹೇಗಾಗಬಹುದು. ಈ ಮನುಷ್ಯನ ಜೀವನದಲ್ಲಿ ಕಷ್ಟ-ನಷ್ಚ, ಅವಮಾನ-ಅಪಮಾನ ಎಲ್ಲವೂ ಸಾಮಾನ್ಯ.
ಆದರೆ ನಾವು ಆ ಜೀವನದಲ್ಲಿ ಬರುವ ಕಷ್ಟ-ನಷ್ಟ, ಅವಮಾನ – ಅಪಮಾನ ಮುಂತಾದವುಗಳನ್ನು ಎದುರಿಸಿ ಮುನ್ನಡೆದರೆ ಮುಂದೊಂದು ದಿನ ನಮಗೆ ಗೆಲುವು ಖಂಡಿತವಾಗಿ ಸಿಕ್ಕೇ ಸಿಗುತ್ತದೆ.
ಮಾನವನ ಸಾಧನೆಯ ಹಾದಿಯಲ್ಲಿ ಅವಮಾನ-ಅಪಮಾನ, ಕಷ್ಟ-ನಷ್ಟಗಳೂ ಸಾಮಾನ್ಯ. ಆದರೆ ಅದನ್ನೆಲ್ಲ ಮೀರಿ ಮುನ್ನಡೆದರೆ ಮುಂದೊಂದು ದಿನ ನಾವು ಇತಿಹಾಸ ಸೃಷ್ಟಿಸಲೂ ಬಹುದು.
ಮನುಷ್ಯನ ಜೀವನದಲ್ಲಿ ಮಾತ್ರವಲ್ಲ ಈ ಜಗತ್ತಿನಲ್ಲಿರುವ ಸಕಲ ಪ್ರಾಣಿ ಪಕ್ಷಿಗಳಿಗೂ ಅವರದೇ ಆದ ಕಷ್ಟ ಗಳಿರುತ್ತವೆ.
ಆದ್ದರಿಂದ ಕಷ್ಟಕ್ಕೆ ಹೆದರಬೇಡಿ, ಅವಮಾನಕ್ಕೆ ಎದೆಗುಂದಬೇಡಿ.
✍ಉಲ್ಲಾಸ್ ಕಜ್ಜೋಡಿ