Ad Widget

ಪಂಜ: ದಿ. ಮಹಾಬಲ ಕುಳರವರಿಗೆ ನುಡಿನಮನ

ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾಜಮುಖಿ ಚಿಂತನೆಗಳೊಂದಿಗೆ ಸಂಘಟನಾತ್ಮಕವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಾರ್ಥಕ ಬದುಕಿನ ಹಾದಿಯಲ್ಲಿ ಆಕಸ್ಮಿಕವಾಗಿ ಅಗಲಿದ ಪಂಜ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ದಿ. ಮಹಾಬಲ ಕುಳರವರ ಶ್ರದ್ಧಾಂಜಲಿ ಸಭೆಯು ಜೇಸಿಐ ಪಂಜ ಪಂಚಶ್ರೀ, ಲಯನ್ಸ್ ಕ್ಲಬ್ ಪಂಜ, ಆರಾಧನ ಸಮಿತಿ ಪಂಜ, ಹಿರಿಯ ವಿದ್ಯಾರ್ಥಿ ಸಂಘ ಸ. ಪ. ಪೂ. ಕಾಲೇಜು ಪಂಜ ಹಾಗೂ ಮನೆಯವರ ನೇತೃತ್ವದಲ್ಲಿ ನ.22 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಜರುಗಿತು.

. . . . . .

ಮನುಷ್ಯನು ಹುಟ್ಟಿದ ಮೇಲೆ ಹೇಗೆ ಬದುಕಬೇಕು ಎಂಬುದಕ್ಕೆ ಮಹಾಬಲ ಕುಳ ರವರು ಪುಸ್ತಕವಿದ್ದಂತೆ. ಅವರು ಸಾಮಾಜಿಕ , ವೃತ್ತಿ, ಕೌಟುಂಬಿಕ ಜೀವನದಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆತು, ಅಜಾತಶತ್ರುವಾಗಿ ಬಹಳಷ್ಟು ಸಾಧನೆಗೈದಿದ್ದಾರೆ” ಎಂದು ನ್ಯಾಯವಾದಿ ಹಾಗೂ ಮಹಾಬಲ ಕುಳರವರ ಸಂಬಂಧಿ ಭಾಸ್ಕರ ಕೋಳ್ಪೆ ಹೇಳಿದರು.

ತನ್ನ ಕುಟುಂಬದಂತೆ, ಪಂಜ ಜೇಸಿ ಸಂಸ್ಥೆಯನ್ನು ಅವರು ಜೀವನ ಪರ್ಯಂತ ಎರಡನೇ ಕುಟುಂಬವೆಂದೇ ಪರಿಗಣಿಸಿದ್ದರು. 1997 ರಲ್ಲಿ ಪಂಜದಲ್ಲಿ ಜೇಸಿ ಸಂಸ್ಥೆ ಸ್ಥಾಪನೆಯಾಗಲು ಮಹಾಬಲ ಕುಳರ ಪಾತ್ರ ಮಹತ್ವವಾಗಿದ್ದು, ಅವರು ನಿಸ್ವಾರ್ಥ ನಾಯಕತ್ವದಿಂದ ಅತ್ಯುತ್ತಮ ಘಟಕಾಧ್ಯಕ್ಷನಾಗಿ ಗುರುತಿಸಿಕೊಂಡಿದ್ದರು. ಅವರಿಂದ ಸಮಾಜಕ್ಕೆ ಬಹಳಷ್ಟು ಕೊಡುಗೆಗಳು, ಸೇವೆಗಳು ಸಿಕ್ಕಿದೆ. ಅವರ ಸರಳತೆ,ಸಜ್ಜನಿಕೆ, ಆತ್ಮೀಯತೆ, ಅಜಾತಶತ್ರುತ್ವ ನಾವೆಲ್ಲ ಮೈಗೂಡಿಸಿಕೊಳ್ಳಬೇಕು” ಎಂದು ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಶಶಿಧರ ಪಳಂಗಾಯ ರವರು ಹೇಳಿದರು.

ಮಹಾಬಲ ಕುಳರವರು ಪಂಜ ಲಯನ್ಸ್ ಕ್ಲಬ್ ನಲ್ಲಿ ಕಾರ್ಯದರ್ಶಿಯಾಗಿ, ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಕಾರ್ಯಕ್ರಮಗಳಿಗೆ ಸಂಸ್ಥೆಗೆ ಜಿಲ್ಲೆಯಿಂದ ಉತ್ತಮ ಸ್ಥಾನ ಬಂದಿರುತ್ತದೆ. ಅವರ ಜೀವನ ಎಲ್ಲರಿಗೂ ಮಾದರಿ ಮತ್ತು ಮುಂದಿನ ಪೀಳಿಗೆ ಅವರನ್ನು ಅನುಸರಿಸುವಂತಾಗಲಿ” ‌ಎಂದು ಲಯನ್ಸ್ ಪ್ರಾಂತೀಯ ಸಲಹೆಗಾರ‌ ಜಾಕೆ ಮಾಧವ ಗೌಡ ಹೇಳಿದರು.

ಮಹಾಬಲ ಕುಳರವರು ಪಂಜ ಸರಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಸತತ 5 ವರುಷಗಳಿಂದ ಸಾಕಷ್ಟು ದುಡಿದಿದ್ದಾರೆ. ಸುಮಾರು ರೂ.6ಲಕ್ಷ ಕ್ಕೂ ಮಿಕ್ಕಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಶಾಲೆಯ ಋಣ ತೀರಿಸುವ ಹಂಬಲ ಅವರಲ್ಲಿತ್ತು” ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು ಹೇಳಿದರು.

ಆರಾಧನಾ ಸಮಿತಿ ವತಿಯಿಂದ ಪರಮೇಶ್ವರ ಗೌಡ ಬಿಳಿಮಲೆ, ನ್ಯಾಯವಾದಿ ಎಂ.ವೆಂಕಪ್ಪಗೌಡ ಸುಳ್ಯ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಗೌಡ ರವರು ನುಡಿ ನಮನ ಸಲ್ಲಿಸಿದರು. ಸೋಮಶೇಖರ ನೇರಳ ನಿರೂಪಿಸಿದರು.

ಮೃತರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮೃತರ ತಾಯಿ ಶ್ರೀಮತಿ ರಾಧಮ್ಮ ಪದ್ಮಯ್ಯ ಗೌಡ ರವರು ದೀಪ ಬೆಳಗಿಸಿದರು. ಪತ್ನಿ ಶ್ರೀಮತಿ ರುಕ್ಮಿಣಿ , ಪುತ್ರ ಕೌಶಿಕ್ ಕುಳ, ಪುತ್ರಿ ಶ್ರೀಮತಿ ಕ್ಷಮಾ ನಿತಿನ್ ಕುಮಾರ್ ಕಡಬ, ಸಹೋದರ ಸುಬ್ರಹ್ಮಣ್ಯ ಕುಳ , ಸಹೋದರಿಯರು ಅಳಿಯ, ಮೊಮ್ಮಗಳು, ಕುಟುಂಬಸ್ಥರು, ಬಂಧು, ಮಿತ್ರರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!