ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ವಳಲಂಬೆ ಇದರ ಆಶ್ರಯದಲ್ಲಿ ಮೂರನೇ ವರ್ಷದ ರಂಗಪ್ರವೇಶ ಮತ್ತು ಯಕ್ಷೋತ್ಸವ ನ.22ರಂದು ವಳಲಂಬೆಯಲ್ಲಿ ನಡೆಯಿತು. ಸಭೆಯಲ್ಲಿ ಹವ್ಯಾಸಿ ಕಲಾವಿದ ಕುಶಾಲಪ್ಪ ಗೌಡ ರುದ್ರಚಾಮುಂಡಿ, ಯಕ್ಷಗುರು ಗಿರೀಶ್ ಗಡಿಕಲ್ಲುರವರನ್ನು ಸನ್ಮಾನಿಸಿ ಮಾತನಾಡಿದ ನಿವೃತ್ತ ಮುಖ್ಯಗುರು ಶಿವರಾಮ ಶಾಸ್ತ್ರಿ ಆಚಳ್ಳಿ ‘ ಜಗತ್ತಿನಲ್ಲಿ ಲೌಕಿಕ ಬದುಕಿಗಿಂತ ಸಾತ್ವಿಕ ಆನಂದ ಶ್ರೇಷ್ಟ, ಇದರಿಂದಲೇ ಮನುಷ್ಯ ಪರಿಪೂರ್ಣಾಗುತ್ತಾನೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕೇಶವ ಹೊಸೊಳಿಕೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪಂಜ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಅರ್ಚಕ ಮಹಾಬಲೇಶ್ವರ ಭಟ್, ನಿವೃತ್ತ ಶಿಕ್ಷಕ ಹಾಗೂ ಹವ್ಯಾಸಿ ಕಲಾವಿದ ಕುಶಾಲಪ್ಪ ಗೌಡ ರುದ್ರಚಾಮುಂಡಿ, ಯಕ್ಷಗುರು ಗಿರೀಶ್ ಗಡಿಕಲ್ಲು, ಭಜನಾ ಸಮಿತಿ ಸಂಚಾಲಕರಾದ ಲೀಲಾಧರ್ ಅಡ್ಡನಪಾರೆ, ಕೇಶವ ಕಡೋಡಿ, ಬಾಬು ಮಾಸ್ತರ್ ಅಚ್ರಪ್ಪಾಡಿ ಉಪಸ್ಥಿತರಿದ್ದರು. ಮಾಧವ ಮೂಕಮಲೆ ಸ್ವಾಗತಿಸಿ, ಪ್ರಸ್ತಾಪಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ನಿರೂಪಿಸಿದರು.
ಬೆಳಿಗ್ಗೆ 9 ಗಂಟೆಯಿಂದ ವಳಲಂಬೆ ಭಜನಾ ಸೇವಾ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಯಕ್ಷ ಗುರುಗಳಿಗೆ ವಿಧ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಬಳಿಕ ಯಕ್ಷ ವಿದ್ಯಾರ್ಥಿಗಳಿಂದ “ಅಂಬಾವಿಲಾಸ” ಯಕ್ಷಗಾನ ಪ್ರದರ್ಶನಗೊಂಡಿತು.
- Friday
- November 1st, 2024