ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ದಿವ್ಯಜ್ಯೋತಿ ಕ್ಯಾಶ್ ಸರ್ಟಿಫಿಕೇಟ್ ಹಾಗೂ ರಿಕರಿಂಗ್ ಡೆಪಾಸಿಟ್ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಉದ್ಘಾಟನೆ ನ.21 ರಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ.ನೆಡುನಿಲಂ ವಹಿಸಿದ್ದರು. ಸಂತ ಬ್ರಿಜಿಡ್ಸ್ ಚರ್ಚ್ ನ ಧರ್ಮಗುರು ರೆ|ಫಾ| ವಿಕ್ಟರ್ ಡಿಸೋಜ ಆಶೀರ್ವಚನ ಮಾಡಿದರು. ದಿವ್ಯಜ್ಯೋತಿ ಕ್ಯಾಶ್ ಸರ್ಟಿಫಿಕೇಟ್ ಯೋಜನೆಯು 7.5 ವರ್ಷದಲ್ಲಿ ದ್ವಿಗುಣಗೊಳ್ಳುವ ಯೋಜನೆಯಾಗಿದ್ದು ಇದನ್ನು ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ್ ಡಿ.ವಿ.ಯವರು ಜ್ಯೋತಿ ಇಂಡಸ್ಟ್ರೀಸ್ ಮಾಲಕ ಲ.ಜಗನ್ನಾಥ ರೈ ಗಳಿಗೆ ಮತ್ತು ರಿಕರಿಂಗ್ ಡೆಪಾಸಿಟ್ ಅನ್ನು ಸುನಿಲ್ ಮಸ್ಕರೇನಸ್ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ಸಂಘದ ಉಪಾಧ್ಯಕ್ಷ ಜಾನ್ ವಿಲಿಯಂ ಲಸ್ರಾದೋ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ನಿರ್ದೇಶಕಿ ಶ್ರೀಮತಿ ಸುನಿತಾ ಡಿ.ಸೋಜ ಸ್ವಾಗತಿಸಿ, ಸಿಇಒ ಅಜಿತ್ ಪಿಜೆ ವಂದಿಸಿದರು.