Ad Widget

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಕೊರೋನಾ ವಾರಿಯರ್ಸ್ ನೆಲೆಯಲ್ಲಿ ಪತ್ರಕರ್ತರಿಗೆ ಸನ್ಮಾನ – ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸುಳ್ಯದ ಪತ್ರಕರ್ತರಿಗೆ ಕೊರೋನಾ ವಾರಿಯರ್ಸ್ ಗೌರವಾರ್ಪಣೆ, ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಅಭಿನಂದನೆ ಹಾಗೂ ಪ್ರತಿಷ್ಠಾನ ನಡೆಸಿದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯು ಇಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಶ್ರಫ್ ಟರ್ಲಿ, ವಹಾಬ್, ಗಣೇಶ್, ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.
ಕೊರೋನಾ ಸಂದರ್ಭ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ ಸುಳ್ಯದ ಪತ್ರಕರ್ತರನ್ನು ಕೊರೋನಾ ವಾರಿಯರ್ಸ್ ನೆಲೆಯಲ್ಲಿ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ದಿ. ರಾಜೇಶ್ ಶಿಬಾಜೆ ಗೌರವ ಮಾಧ್ಯಮ ಪ್ರಶಸ್ತಿಗೆ ಅರ್ಹರಾದ ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆಯವರನ್ನು ಅಭಿನಂದಿಸಲಾಯಿತು.

. . . . . . .


ಸಜ್ಜನ ಪ್ರತಿಷ್ಠಾನದ ವತಿಯಿಂದ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ರಾಮಕುಂಜದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಕೇರ್ಪಳದ ಕು. ಅನನ್ಯ ಕೆ.ಟಿ., ದ್ವಿತೀಯ ಬಹುಮಾನ ಪಡೆದ ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೇರ್ಪಳದ ಅಮರ್ ಕೆ.ಪಿ., ತೃತೀಯ ಬಹುಮಾನ ಪಡೆದ ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಕು.ಲಿಖಿತಾ ಕೆ.ಎಸ್., ಚತುರ್ಥ ಬಹುಮಾನವನ್ನು ಮಡಿಕೇರಿ ದ.ಪ.ಪೂ.ಕಾಲೇಜಿನ ಕು.ಸಮೀನಾ ಎಂ.ಎಸ್ ಅವರಿಗೆ ಬಹುಮಾನ ವಿತರಿಸಲಾಯಿತು. ಕೊರೊನಾ ವಾರಿಯರ್ಸ್‌ ಗೌರವವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರುಗಳಾದ ಮುರಳೀಧರ ಅಡ್ಡನಪಾರೆ, ಶಿವಪ್ರಸಾದ್ ಕೇರ್ಪಳ, ಗಿರೀಶ್ ಅಡ್ಪಂಗಾಯ, ಗಂಗಾಧರ ಕಲ್ಲಪ್ಪಳ್ಳಿ, ಅಧ್ಯಕ್ಷ ಕೃಷ್ಣ ಬೆಟ್ಟ, ಕಾರ್ಯದರ್ಶಿ ಪದ್ಮನಾಭ ಮುಂಡೋಕಜೆ, ವಿನಯ ಜಾಲ್ಸೂರು, ಲೋಕೇಶ್ ಗುಡ್ಡೆಮನೆ, ಅಮರ ಸುದ್ದಿ ವರದಿಗಾರ ಹಸೈನಾರ್ ಜಯನಗರ ಇವರಿಗೆ ನೀಡಿ ಗೌರವಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!