Ad Widget

ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಮಿಕರ ಕಾನೂನುಗಳನ್ನು ಬದಲಿಸಿ ಪ್ರಶ್ನೆ ಮಾಡುವ ಹಕ್ಕನ್ನು ಕಸಿದು, ದುಡಿಯುವ ವರ್ಗದ ಬೆನ್ನೆಲುಬನ್ನೇ ಮುರಿಯುವಂತೆ ಮಾಡಿದ್ದಾರೆ : ಕೆ.ಪಿ.ಜಾನಿ

ಕೋವಿಡ್ 19 ರ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತರದಲ್ಲಿ ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗಗಳು ಅಡಳಿತದ ಕಡೆಯಿಂದ ಹೊಡೆತ ಮೇಲೆ ಹೊಡೆತ ತಿನ್ನುತ್ತಲೇ ಇದೆ. ಮಾತ್ರವಲ್ಲ ಮಹಾಮಾರಿ ವೈರಸ್ಸಿನಿಂದ ಹೊಡೆತ ಒಂದು ಕಡೆಯಾದರೆ ಸ್ವಯಂಕೃತ ಅಪರಾದವೆನ್ನಬಹುದಾದ ರೀತಿಯಲ್ಲಿ ಸರಕಾರಗಳು ದೇಶಕ್ಕೆ ಅನ್ನ ನೀಡುವ ರೈತರನ್ನು ದಮನಿಸುವ ಕಾರ್ಯ ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಾ ಬರುತ್ತಿದೆ ‌.ಆರ್ಥಿಕ ಸಹಾಯಗಳನ್ನು ನೇರವಾಗಿ ನೀಡಿ ಕೊಂಡುಕೊಳ್ಳುವ ಅವರ ಶಕ್ತಿ ಕುಂದದ ಹಾಗೆ ನೋಡಿಕೋಳ್ಳಬೇಕಿತ್ತೋ ಅಂತಹಾ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಸರಕಾರವು ಕಾರ್ಪೋರೇಟ್ ಧಣಿಗಳಿಗೆ ಪ್ರೋತ್ಸಾಹ ನೀಡಿದೆ. ಕಾರ್ಮಿಕ ವರ್ಗ ತ್ಯಾಗ ಬಲಿದಾನ, ಹೋರಾಟದ ಮೂಲಕ ಪಡೆದ 29 ಕಾರ್ಮಿಕ ಪರವಾದ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ (ಕಾನೂನು ಬದಲಾಗಿ ಸಂಹಿತೆಯಾದಗ ದುಡಿಯುವ ವರ್ಗ ತನ್ನ ಎಲ್ಲಾ ಹಕ್ಕುಗಳನ್ನೂ ಕಳಕೊಂಡು ಮಾಲಿಕರ ಅಥವಾ ಆಡಳಿತದ ದಯೆಯಿಂದ ಬದುಕುವಂತೆ) ಬದಲಿಸಿ ಪ್ರಶ್ನೆ ಮಾಡುವ ಹಕ್ಕನ್ನು ಕಸಿದುಕೊಂಡು ದುಡಿಯುವ ವರ್ಗದ ಬೆನ್ನೆಲುಬನ್ನೇ ಮುರಿಯುವಂತೆ ಮಾಡಿದೆ. ಇದರಿಂದ ಕಾರ್ಮಿಕರಿಗೆ ಸಂಘ ಕಟ್ಟುವ ಹಕ್ಕು ಇರುವುದಿಲ್ಲ. ಮಾಲಕರಿಂದ ಶೋಷಣೆ ದಬ್ಬಾಳಿಕೆಯಾದಾಗ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಹಾ ಈ ಹಿಂದೆ ಇದ್ದ ಕಾರ್ಮಿಕರ ಹಕ್ಕು ಇದೀಗ ಇವರ ದ್ವಂದ್ವ ನೀತಿಯಿಂದ ಕಸಿಯಲ್ಪಟ್ಟಿದೆ.
ವೇತನದ ಬಗ್ಗೆ ಮತ್ತು ಕೆಲಸದ ಭದ್ರತೆ ಹಾಗೂ ಜೀವದ ಭದ್ರತೆ ಬಗ್ಗೆ ಸಂವಿಧಾನದ ಆಶಯದಂತೆ ಇದ್ದ ಕಾರ್ಮಿಕರ ಹಕ್ಕು ಮೊಟಕುಗೊಳಿಸಲಾಗಿದೆ. ಮೂಲವೇತನ -ಕನಿಷ್ಠ ವೇತನ- ತುಟ್ಟಿ ಭತ್ಯೆ ಯಂತಹಾ ಈ ಹಿಂದೆ ಇದ್ದ ವೈಜ್ಞಾನಿಕ ತಳಹದಿಯು ಕೆಡವಲ್ಪಟ್ಟು , ಆಡಳಿತಕ್ಕೆ ಮತ್ತು ಮಾಲಿಕರಿಗೆ ವರದಾನವಾಗುವಂತೆ ತಿದ್ದುಪಡಿ ಮಾಡಿರುವುದು ಖಂಡನೀಯ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸುಳ್ಯ ಸಮಿತಿ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಮಾತನಾಡಿದರು. ಈ ಹಿಂದೆ ಕಾನೂನಾಗಿದ್ದ ನಿಯಮಗಳನ್ನು ಕೇವಲ ಅಸ್ತಿಪಂಜರದ ರೀತಿ ಹೆಸರಿಗೆ ಮಾತ್ರವಾಗಿ ಉಳಿಯುವಂತೆ ಸಂಹಿತೆಯನ್ನಾಗಿ ಬದಲಿಸಲಾಗಿದೆ. ಸುಧಾರಿಸಬೇಕಿದ್ದ ಕಾರ್ಮಿಕರ ಬಾಳನ್ನು ಮತ್ತೆ ಹಳೆಯ ಜೀತದಾಳು -ಅಸ್ಪಶ್ಯತೆ ಗುಲಾಮಗಿರಿಯತ್ತ ಸಮಾಜವನ್ನು ಮರಳಿ ಕೊಂಡೊಯ್ಯುವತ್ತ ಮುಂದಾಗಿದ್ದಾರೆ.ಎರಡನೇ ಸ್ವಾತಂತ್ರ್ಯ ಚಳವಳಿಯೆಂದೇ ಬಣ್ಣಿಸಬಹುದಾದ ಹೋರಾಟದ ಮುಂದುವರಿದ ಬಾಗವಾಗಿ ಇಡೀ ದೇಶದಲ್ಲಿ ಇದೇ 26 ರಂದು ಸಾರ್ವತ್ರಿಕ ಮುಷ್ಕರಕ್ಕೆ ಕೊಟ್ಟ ಕರೆಯಂತೆ ,ಸುಳ್ಯದಲ್ಲಿ ಕೂಡಾ ನವೆಂಬರ್ 26 ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಪ್ರದರ್ಶನ ನಡೆಯಲಿದೆ. ಈ ಪ್ರತಿಭಟನಾ ಪ್ರದರ್ಶನಕ್ಕೆ ಜನಪರರಾದ ಎಲ್ಲಾ ಸಂಘಟನೆಗಳ ಬೆಂಬಲವನ್ನೂ ಕೋರುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರುಗಳಾದ ನಾಗರಾಜ ಮೇಸ್ತ್ರಿ ಎಚ್ ಕೆ, ಬಿಜು ಅಗಸ್ಟೀನ್, ಶ್ರೀಧರ ಕಡೆಪ್ಪಾಳ, ಮೋನಪ್ಪ ಜಯನಗರ, ಅಬೂಬಕ್ಕರ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!