ಕಸ್ತೂರಿ ರಂಗನ್ ವರದಿ ವಿರುಧ್ಧದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ (ನ.27)ನಡೆಯಲಿರುವ ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ನ.21 ರಂದು ಮಧ್ಯಾಹ್ನ 1.30 ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದಿಂದ ಹೊರಡಲಿದೆ. ಯಜ್ಙೇಶ್ ಆಚಾರ್ ಜಾಥಾ ಕ್ಕೆ ಚಾಲನೆ ನೀಡಲಿದ್ದಾರೆ. ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ರಾಜಕೀಯ ನೇತಾರರಾದ ಹರೀಶ್ ಇಂಜಾಡಿ, ಎಸ್. ಎನ್. ರಾಜೇಶ್ ಮತ್ತಿತರರು ಉಪಸ್ಥಿತರಿರಲಿದ್ದಾರೆ
ಬಳಿಕ ಅಪರಾಹ್ನ 2 ಗಂಟೆಗೆ ಗುತ್ತಿಗಾರಿಗೆ ತಲುಪಲಿದ್ದು, ಚಿಂತಕ, ವಾಗ್ಮಿ ಲಕ್ಮೀಶ್ ಗಬ್ಬಲಡ್ಕ, ರಾಜಕೀಯ ಧುರೀಣ ರಾದ ವೆಂಕಟ್ ದಂಬೆಕೋಡಿ, ನಿತ್ಯಾನಂದ ಮುಂಡೋಡಿ ಜಾಥಾವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಬಳಿಕ ದುಗ್ಗಲಡ್ಕದಲ್ಲಿ ಪ್ರಮುಖ ನೇತಾರರು ಮಾತನಾಡಲಿದ್ದು ಸಂಜೆ 3.30ಕ್ಕೆ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾರೋಪ ಭಾಷಣ ನಡೆಯಲಿದೆ. ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಲಿದ್ದಾರೆ.ವಿವಿಧ ಪಕ್ಷಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
- Friday
- November 22nd, 2024