ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮವು ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ರವರು ವಹಿಸಿದ್ದರು . ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಪೇರಾಲು ರವರು ಉದ್ಘಾಟಿಸಿದರು . ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸುಳ್ಯದ ಖ್ಯಾತ ಕವಯತ್ರಿ ಸಾನು ಉಬರಡ್ಕ ರವರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ದುಗ್ಗಲಡ್ಕದ ಸ. ಪ್ರೌಢಶಾಲೆಯ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ಅತ್ಯಾಡಿ ರವರು ಭಾಗವಹಿಸಿದ್ದರು . ಗೋಪಾಲ ಕೃಷ್ಣ ಭಟ್ ಕಟ್ಟತ್ತಿಲ ಹಾಗೂ ಉದಯರವಿ ಶೆಟ್ಟಿ ರವರಿಗೆ ಚಂದನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು . ನಂತರ ನಡೆದ ಕವಿಗೋಷ್ಠಿಯಲ್ಲಿ ಸಮ್ಯಕ್ತ್ ಜೈನ ಕಡಬ , ಎಮ್ ಎ ಮುಸ್ತಫಾ ಬೆಳ್ಳಾರೆ , ಪೆರುಮಾಳ್ ಐವರ್ನಾಡು , ಗೋಪಾಲ್ ಕೃಷ್ಣ ಭಟ್ ಕಟ್ಟತ್ತಿಲ , ನಾರಾಯಣ್ ಕುಂಬ್ರ , ಸುಬ್ರಹ್ಮಣ್ಯ ಅತ್ಯಾಡಿ , ಅಪೂರ್ವ ಕಾರಂತ , ಸುಮಂಗಲ ಲಕ್ಷ್ಮಣ ಕೋಳಿವಾಡ , ಪ್ರಜ್ಞಾ ಕುಲಾಲ್ ಕಾವು, ಅನುರಾಧಾ ಶಿವಪ್ರಕಾಶ್ , ಮಮತಾ ರವೀಶ್ ಪದ್ದಂಬೈಲು , ಜೀವಿತಾ ಪುತ್ತೂರು , ಚಂದ್ರಮೌಳಿ ಪಾಣಾಜೆ , ಕುಸುಮಾಕರ್ ಅಂಬೆಕಲ್ಲು ಚೆಂಬು , ಶಿವಾನಂದ್ ರಂಗತ್ ಮಲೆ , ಯೋಗೀಶ್ ಹೊಸೂಳಿಕೇ , ಎಮ್ ಪಿ ಬಷೀರ್ ಅಹ್ಮದ್ ಬಂಟ್ವಾಳ ಮತ್ತು ದುಗ್ಗಲಡ್ಕ ಸರಕಾರೀ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶಮಿತಾ , ಸನತ್ , ಸಾಯಿ ಪ್ರಶಾಂತ್ , ಸಂದೇಶ್ , ಚೈತನ್ಯ , ಅಂಕಿತಾ , ಮೇಘ , ಮೋಕ್ಷಿತಾ , ಶ್ರುತಿ , ರವರು ಭಾಗವಹಿಸಿದ್ದರು . ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಮತಾ ರವೀಶ್ ಪದ್ದಂಬೈಲ್ ಮತ್ತು ಸಂದೇಶ್ ರವರಿಗೆ ಚಂದನ ರಾಜ್ಯೋತ್ಸವ ಸನ್ಮಾನ ಮಾಡಲಾಯಿತು . ಸಾಯಿ ಹೇಮಂತ್ ಮತ್ತು ಸಾಯಿ ಪ್ರಶಾಂತ್ ಪ್ರಾರ್ಥನಾ ಗೀತೆ ಹಾಡಿದರು . ಸುಮಂಗಲ ಲಕ್ಷ್ಮಣ ಕೋಳಿವಾಡ ರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು . ಮಮತಾ ರವೀಶ್ ಸ್ವಾಗತಿಸಿದರು . ಶಿವಾನಂದ್ ರಂಗತ್ ಮಲೆ ರವರು ನಿರೂಪಿಸಿದರು .ಯೋಗೀಶ್ ಹೊಸೊಳಿಕೆ ವಂದಿಸಿದರು . ಎಲ್ಲಾ ಕವಿಗಳಿಗೆ ಅಮೂಲ್ಯ ನಾಲ್ಕು ಸಾಹಿತ್ಯ ಕೃತಿಗಳ ಜೊತೆ ಆಕರ್ಷಕ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು .
- Thursday
- November 21st, 2024