ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯರ ಆರಾಧ್ಯ ದೇವರು ಶತಮಾನದಿಂದ ತುಳುನಾಡ ಭಕ್ತರಿಂದ ಆರಾಧಿಸುತ್ತಾ ಬಂದಿರುವ ಎಣ್ಮೂರು ಗ್ರಾಮದ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶೀಘ್ರದಲ್ಲಿ ನಡೆಯಲಿದ್ದು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ನಾಗಬ್ರಹ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶೋಭಾ ಕರಂದ್ಲಾಜೆ ಅವರು ಸರಕಾರ ನೀಡಿದ ರೂ ೫೦ ಲಕ್ಷ ಅನುದಾನವನ್ನು ಜೀರ್ಣೋದ್ಧಾರ ಕಾರ್ಯಕ್ಕೆ ಸಮರ್ಪಕವಾಗಿ ವಿನಿಯೋಗಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀಧರ ಕೋಟ್ಯಾನ್ ಉಡುಪಿ, ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಾನಂದ ಹೇಮಳ, ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ ಹಾಗೂ ಬ್ರಹ್ಮರು ಉಳ್ಳಾಕುಲು ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾರಾಯಣ ಕೋರ್ಜೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಐಪಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಹೇಮಳ, ಸಂಚಾಲಕ ಬಾಲಕೃಷ್ಣ ಹೇಮಳ, ಉಪಾಧ್ಯಕ್ಷರಾದ ಧನಂಜಯ ಕೇನಾಜೆ, ಗೋಪಾಲಕೃಷ್ಣ ಕೆ, ಕಾರ್ಯದರ್ಶಿ ಜಯರಾಮ ಐಪಳ, ಕುಶಾಲಪ್ಪ ಗೌಡ ಉದ್ಲಡ್ಡ ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅನುದಾನಕ್ಕೆ ಮನವಿ : ಈ ಸಂದರ್ಭದಲ್ಲಿ ದೇವಸ್ಥಾನ ಹಾಗೂ ಇತರ ಬಾಕಿ ಉಳಿದಿರುವ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸಿಕೊಡುವಂತೆ ಸಮಿತಿ ವತಿಯಿಂದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದರು. ಈ ಕುರಿತು ತಕ್ಷಣ ಸ್ಪಂದಿಸುವ ಭರವಸೆಯನ್ನು ಸಂಸದರು ನೀಡಿದ್ದಾರೆ.