ಸುಳ್ಯ ಜಯನಗರ 19ನೇ ವಾರ್ಡಿನಲ್ಲಿ ಬಡ ಕುಟುಂಬದ ಯಜಮಾನ ಅನಾರೋಗ್ಯದಿಂದ ಬಳಲುತ್ತಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಇದನ್ನು ಗಮನಿಸಿದ ಜಯನಗರ 19ನೇ ವಾರ್ಡಿನ ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ ರವರ ನೇತೃತ್ವದಲ್ಲಿ ಬಡಕುಟುಂಬಕ್ಕೆ ದೀಪಾವಳಿ ಹಬ್ಬ ಆಚರಿಸಲು ಬೇಕಾಗಿರುವ ಆಹಾರ ಸಾಮಾಗ್ರಿಗಳು ಮತ್ತು ನೂತನ ಉಡುಪುಗಳನ್ನು ನೀಡಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡ ರಾಧಾಕೃಷ್ಣ ನಾಯಕ್, ಪ್ರವೀಣ್ ಕುಮಾರ್ ಜಯನಗರ, ಕುಸುಮಾಧರ, ಕಾರ್ಮಿಕ ಮುಖಂಡ ನಾಗರಾಜ ಮೇಸ್ತ್ರಿ, ಸ್ಥಳೀಯ ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಮತ್, ಕಾರ್ಯದರ್ಶಿ ಜಗದೀಶ್ ಹಿರಿಯರಾದ ರಾಮಚಂದ್ರ ಟೈಲರ್, ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024