ಸುಳ್ಯದಲ್ಲಿ ಪ್ರಥಮ ಬಾರಿಗೆ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರ ಅಳವಡಿಸಿದ ಸುಸಜ್ಜಿತ ಮಳಿಗೆಯ ಉದ್ಘಾಟನಾ ಸಮಾರಂಭವು ಎಲಿಮಲೆ ಉದಯ ಟೈಲರಿಂಗ್ ಮತ್ತು ಗಣೇಶ ಕ್ಲೋತ್ ಸೆಂಟರ್ ಕೇಪಳಕಜೆ ಕಾಂಪ್ಲೆಕ್ಸ್ ಎಲಿಮಲೆ ಯಲ್ಲಿ ಇಂದು ನಡೆಯಿತು. ಶಾಸಕರಾದ ಎಸ್.ಅಂಗಾರ ಉದ್ಘಾಟನೆಯನ್ನು ನೆರವೇರಿಸಿ ಸ್ವ-ಉದ್ಯೋಗದಿಂದ ದೇಶದ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು. ಸೆಲ್ಕೋ ಫೌಂಡೇಶನ್ ಬೆಂಗಳೂರು ಇದರ ಎ.ಜಿ.ಓ.ಜಯಪ್ರಕಾಶ್ ಶೆಟ್ಟಿ ಸೋಲಾರ್ ಬಳಕೆ ಹಾಗೂ ಉಪಕರಣಗಳ ಉಪಯೋಗಳ ಮಾಹಿತಿಯನ್ನು ನೀಡಿದರು.ಹಾಗೂ ಇದು ಸೆಲ್ಕೋ ಫೌಂಡೇಶನಿಂದ ನೆರವು ನೀಡಿ ಉದ್ಘಾಟನೆಗೊಂಡ ಮೊದಲ ಕೇಂದ್ರವಾಗಿದೆ ಎಂದರು. ಈ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಸೀನಿಯರ್ ಮ್ಯಾನೇಜರ್ ರಾಧಾಕೃಷ್ಣ, ಕೇಪಳಕಜೆ ಕಾಂಪ್ಲೆಕ್ಸ್ ಮಾಲಕ ಸೋಮಶೇಖರ ಕೇಪಳಕಜೆ ಹಾಗೂ ಉದಯರವಿ ರವರ ತಂದೆ ತಾಯಿ ಉಪಸ್ಥಿತರಿದ್ದರು. ಮಾಲಕರಾದ ಉದಯರವಿ ಹಾಗೂ ಧನಂಜಯ ಇವರನ್ನು ಸೆಲ್ಕೋ ಸೋಲಾರ್ ಪ್ರೈ.ಲಿ. ಬೆಂಗಳೂರು ಮತ್ತು ಸುಳ್ಯ ಶಾಖೆ ಇದರ ವತಿಯಿಂದ ಸನ್ಮಾನಿಸಲಾಯಿತು.
ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರದ ಅಳವಡಿಕೆಗೆ ಸೆಲ್ಕೋ ಫೌಂಡೇಶನ್ ಬೆಂಗಳೂರು ಹಾಗೂ ಸೆಲ್ಕೋ ಸೋಲಾರ್ ಪ್ರೈ.ಲಿ. ಬೆಂಗಳೂರು ಇವರ ಸಹಕಾರದಿಂದ ಸುಳ್ಯ ಶಾಖೆಯವರು ಅಳವಡಿಕೆ ಮಾಡಿರುತ್ತಾರೆ. ಹೇಮನಾಥ್.ಜಿ ಸ್ವಾಗತಿಸಿ, ಉದಯರವಿ ವಂದಿಸಿದರು. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.