ಕಳೆದ ಕೆಲವು ದಿನಗಳ ಹಿಂದಿನಿಂದ ಸುಳ್ಯದ ಕೆಲವು ಮೊಬೈಲ್ ಅಂಗಡಿ ಗಳು ತಮ್ಮ ಸಂಸ್ಥೆಯ ಪ್ರಚಾರ ಪತ್ರದೊಂದಿಗೆ ಜಾಹೀರಾತನ್ನು ಪ್ರಕಟಿಸಿ ಈ ಜಾಹೀರಾತನ್ನು ಸಾರ್ವಜನಿಕರು ತಮ್ಮ ತಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಆಗಿಸಿ ಅದರಲ್ಲಿ 500 ಮತ್ತು 200 ವೀಕ್ಷಕರನ್ನು ಮಾಡಿದರೆ ಅವರಿಗೆ ಸಂಸ್ಥೆಯ ವತಿಯಿಂದ ಸೂಕ್ತ ಬಹುಮಾನ ನೀಡುವುದಾಗಿ ಪ್ರಚಾರಪಡಿಸಿದ್ದರು. ಕೆಲವು ಅಂಗಡಿಗಳು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿದರೆ, ಸುಳ್ಯದ ಪ್ರತಿಷ್ಠಿತ ಅಂಗಡಿಯೊಂದು ದಿನ ಬಹುಮಾನಗಳನ್ನು ಗೆಲ್ಲಿರಿ ಎಂಬ ಜಾಹೀರಾತನ್ನು ನೀಡಿತ್ತು. ಇದರಿಂದ ಸುಳ್ಯದ ವ್ಯಕ್ತಿಯೊಬ್ಬರು ತಾನು ಮೋಸ ಹೊಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಬರಹವನ್ನು ನೀಡಿದ್ದಾರೆ.
ಈ ಮೇಲಿನ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುತ್ತಾರೆ. ಒಟ್ಟಿನಲ್ಲಿ ಜನಸಾಮಾನ್ಯರ ಮೋಸ ಗೊಳ್ಳುವ ಮತ್ತೊಂದು ಜಾಲ ಇದಾಗಿರಬಹುದೇನೋ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಸಂಸ್ಥೆಯ ಮಾಲಕರನ್ನು ಸಂಪರ್ಕಿಸಿದಾಗ ಅದಕ್ಕೆ ಷರತ್ತುಗಳು ಅನ್ವಯಿಸುತ್ತದೆ ಎಂದು ಹಾಕಿದ್ದೆವು. ನಾವು ಮೊದಲು ಬಂದ 10 ಜನಗಳಿಗೆ ನೀಡಿದ್ದೇವೆ. ಪ್ರಕಟಣೆಯಲ್ಲಿ ಪ್ರತಿದಿನ ಎಂದು ತಪ್ಪಾಗಿದೆ. ಸ್ಟೇಟಸ್ ಹಾಕಲು ವಾರದಲ್ಲಿ 2, 3 ನಿಗದಿ ಪಡಿಸಿದ್ದೇವು . ಮೊದಲು ಬಂದ ಸುಮಾರು 100 ಅಧಿಕ ಸ್ಟೇಟಸ್ ವೀಕ್ಷಕ ವಿಜೇತರಿಗೆ ವಿತರಿಸಲಾಗಿದೆ.
500 ವೀಕ್ಷಕ 15 ವಿಜೇತರಿಗೆ ಮೊಬೈಲ್ ಪೋನ್, 200 ವಿಕ್ಷಕ 25 ವಿಜೇತರಿಗೆ ನೆಕ್ ಬ್ಯಾಂಡ್ ಬಹುಮಾನವನ್ನು ಕೊಡಲಾಗಿದೆ. 75 ಮಂದಿ ಆಕರ್ಷಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.