ಗುತ್ತಿಗಾರಿನಲ್ಲಿ ಸ್ಕೌಟ್ಸ್–ಗೈಡ್ಸ್ ರ‌್ಯಾಲಿ ಹಾಗೂ ಕಬ್–ಬುಲ್‌ಬುಲ್ಸ್ ಉತ್ಸವಕ್ಕೆ ಚಾಲನೆ – ತೌಳವ ಪ್ರಶಸ್ತಿ ಪುರಸ್ಕೃತರಾದ ಶಿವಪ್ರಕಾಶ್‌ ಕಡಪಳ ಅವರಿಗೆ ಸನ್ಮಾನ

ಗುತ್ತಿಗಾರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ, ಸುಳ್ಯ ಇದರ ವತಿಯಿಂದ ಗುತ್ತಿಗಾರಿನ ಪಿಎಂಶ್ರೀ ಕೆಪಿಎಸ್ ಶಾಲೆಯಲ್ಲಿ ನ.27 ಮತ್ತು 28 ರಂದು ನಡೆಯುವ ರೋವರ್–ರೇಂಜರ್ಸ್ ಸಮಾಗಮ, ಸ್ಕೌಟ್ಸ್–ಗೈಡ್ಸ್ ರ‌್ಯಾಲಿ ಹಾಗೂ ಕಬ್–ಬುಲ್‌ಬುಲ್ಸ್ ಉತ್ಸವಕ್ಕೆ ನ.27 ರಂದು ಚಾಲನೆ ನಡೆಯಿತು.

. . . . . . . . .

ಶಾಲಾ ಶಿಕ್ಷಣ ಇಲಾಖೆ, ಪಿಎಂಶ್ರೀ ಕೆಪಿಎಸ್ ಗುತ್ತಿಗಾರು (ಪ್ರಾಥಮಿಕ ವಿಭಾಗ), ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಗುತ್ತಿಗಾರು ಗ್ರಾಮ ಪಂಚಾಯತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗುತ್ತಿಗಾರು ವರ್ತಕರ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಎಸ್.ಡಿ.ಎಂ.ಸು ಅಧ್ಯಕ್ಷ ವೆಂಕಟ್ ದಂಬೆಕೋಡಿ ಕಾರ್ಯಕ್ರಮ ಉದ್ಘಾಟಿಸಿದರು.

. . . . . . .

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜದ ಕಾರ್ಯಾಧ್ಯಕ್ಷ ವೈ.ಎಸ್. ಹರಗಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಿಕ್ಷಣ ಸಚಿವ, ಭಾರತ್ ಸೈಟ್ ಗೈಡ್ಸ್ ನ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿ ಸಿಂದ್ಯಾ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಗುತ್ತಿಗಾರು ಗ್ರಾ.ಪಂ ನ ಆಡಳಿತಾಧಿಕಾರಿ ದೇವರಾಜ್ ಮುತ್ತಾಜೆ, ದ.ಕ.ಜಿಲ್ಲಾ ಗೈಡ್ ಆಯುಕ್ತ ವಿಮಲಾ ರಂಗಯ್ಯ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್‌ ಮೊಗ್ರ, ಗುತ್ತಿಗಾರು ಗ್ರಾ.ಪಂ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ನ ಆಡಳಿತ ಮಂಡಳಿ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಸ್ಥಳೀಯ ಸಂಸ್ಥೆ ಪಂಜ ಇದರ ಅಧ್ಯಕ್ಷ ಬಿ.ಕೆ ಮಾದವ, ಪ್ರಧಾನ ಕಾರ್ಯದರ್ಶಿ ಉದಯಕುಮಾ‌ರ್ ರೈ, ಮುಖೋಪಾದ್ಯಾಯಿನಿ ಸೀತಾ ವಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯ, ತೌಳವ ಪ್ರಶಸ್ತಿ ಪುರಸ್ಕೃತರಾದ ಶಿವಪ್ರಕಾಶ್‌ ಕಡಪಳ ಅವರನ್ನು ಗೌರವಿಸಲಾಯಿತು.

ಸೀರಾ ವಿ ಸ್ವಾಗತಿಸಿ, ವಂದಿಸಿದರು. ಪಂಜ ಸ್ಥಳೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.


ಮಧ್ಯಾಹ್ನ 2.30ರಿಂದ ನಡೆದ ಸ್ವಚ್ಛತಾ ಜಾಗೃತಿ ಅಭಿಯಾನವನ್ನು ಪಿಎಂಶ್ರೀ ಕೆಪಿಎಸ್ ಗುತ್ತಿಗಾರು ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಸನ್ನ ಅಮೆ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಗುತ್ತಿಗಾರು ಅಧ್ಯಕ್ಷ ನವೀನ ಬಾಳುಗೋಡು ಭಾಗವಹಿಸಿದರು.
ಅಪರಾಹ್ನ 4 ಗಂಟೆಯಿಂದ ನಡೆದ ನಗರ ಮೆರವಣಿಗೆಯನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಉಪಸ್ಥಿತರಿದ್ದರು.
ರಾತ್ರಿ 8.30ರಿಂದ ನಡೆದ ಶಿಬಿರಾಗ್ನಿ ಕಾರ್ಯಕ್ರಮವನ್ನು ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ವಿನ್ಯಾಸ್ ಕೊಚ್ಚಿ ಉದ್ಘಾಟಿಸಿದರು. ಜೆಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ ಹಾಗೂ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಅಧ್ಯಕ್ಷ ಸುರೇಶ್ ಬಾಳಿಲ ಅಭ್ಯಾಗತರಾಗಿ ಭಾಗವಹಿಸಿದರು.

ನ.28 ರಂದು ಅಪರಾಹ್ಮ ಸಮರೋಪ ಸಮಾರಂಭ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading