ಸುಳ್ಯ : ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಅಂತಿಮ ಮೀಸಲಾತಿ ಪ್ರಕಟ ; 3 ಜಿ.ಪಂ. ಹಾಗೂ 11 ತಾ.ಪಂ. ಕ್ಷೇತ್ರಗಳ ಮೀಸಲಾತಿ ವಿವರ ಬಹಿರಂಗ

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿನ ಮೂರು ಜಿಲ್ಲಾ ಪಂಚಾಯತ್ ಹಾಗೂ 11 ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಅಂತಿಮಗೊಂಡಿದೆ.

. . . . . . . . .

ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ : ಸುಳ್ಯ ತಾಲೂಕಿನ ಬೆಳ್ಳಾರೆ, ಜಾಲ್ಸೂರು ಹಾಗೂ ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದೆ. ಬೆಳ್ಳಾರೆ ಕ್ಷೇತ್ರವನ್ನು ಸಾಮಾನ್ಯ ಮಹಿಳೆ, ಜಾಲ್ಸೂರು ಕ್ಷೇತ್ರವನ್ನು ಸಾಮಾನ್ಯ ಹಾಗೂ ಗುತ್ತಿಗಾರು ಕ್ಷೇತ್ರವನ್ನು ಸಾಮಾನ್ಯ ಮಹಿಳೆ ವಿಭಾಗಕ್ಕೆ ಮೀಸಲಿಡಲಾಗಿದೆ.
ಕರಡು ಮೀಸಲಾತಿ ಪಟ್ಟಿಯಲ್ಲಿ ಗುತ್ತಿಗಾರು ಕ್ಷೇತ್ರವನ್ನು ಹಿಂದುಳಿದ ವರ್ಗ ಎ ವಿಭಾಗಕ್ಕೆ ಮೀಸಲಿಡಲಾಗಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಈ ಕ್ಷೇತ್ರದ ಮೀಸಲಾತಿಯನ್ನು ಸಾಮಾನ್ಯ ಮಹಿಳೆ ವಿಭಾಗಕ್ಕೆ ಬದಲಾಯಿಸಲಾಗಿದೆ.

. . . . . . .

11 ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ವಿವರ
ಸುಳ್ಯ ತಾಲೂಕು ಪಂಚಾಯತ್‌ನ ಒಟ್ಟು 11 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ವರ್ಗವಾರು ಮೀಸಲಾತಿ ಹಂಚಿಕೆ ಈ ಕೆಳಗಿನಂತಿದೆ.
– ಸಾಮಾನ್ಯ ವರ್ಗ: 6 ಸ್ಥಾನ (3 ಮಹಿಳೆ)
– ಅನುಸೂಚಿತ ಜಾತಿ: 2 ಸ್ಥಾನ (1 ಮಹಿಳೆ)
– ಅನುಸೂಚಿತ ಪಂಗಡ: 1 ಸ್ಥಾನ (ಮಹಿಳೆ)
– ಹಿಂದುಳಿದ ವರ್ಗ ಎ: 2 ಸ್ಥಾನ (1 ಮಹಿಳೆ)

ಕ್ಷೇತ್ರವಾರು ಮೀಸಲಾತಿ
1. ಬೆಳ್ಳಾರೆ – ಅನುಸೂಚಿತ ಜಾತಿ
2.ಬಾಳಿಲ – ಸಾಮಾನ್ಯ ಮಹಿಳೆ
3. ಐವರ್ನಾಡು – ಸಾಮಾನ್ಯ
4. ಜಾಲ್ಸೂರು – ಸಾಮಾನ್ಯ ಮಹಿಳೆ
5. ಅಜ್ಜಾವರ – ಅನುಸೂಚಿತ ಜಾತಿ ಮಹಿಳೆ
6. ಆಲೆಟ್ಟಿ – ಅನುಸೂಚಿತ ಪಂಗಡ ಮಹಿಳೆ
7. ಅರಂತೋಡು – ಹಿಂದುಳಿದ ವರ್ಗ ಎ ಮಹಿಳೆ
8. ಮಡಪ್ಪಾಡಿ – ಸಾಮಾನ್ಯ
9. ನೆಲ್ಲೂರು ಕೆಮ್ರಾಜೆ – ಸಾಮಾನ್ಯ ಮಹಿಳೆ
10. ಗುತ್ತಿಗಾರು – ಹಿಂದುಳಿದ ವರ್ಗ ಎ
11. ಪಂಜ – ಸಾಮಾನ್ಯ

ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿಯಲ್ಲಿ ಕರಡು ಪಟ್ಟಿಯಿಂದ ಅಂತಿಮ ಪಟ್ಟಿಗೆ ಯಾವುದೇ ಬದಲಾವಣೆಯಾಗಿಲ್ಲ. ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ ಗುತ್ತಿಗಾರು ಕ್ಷೇತ್ರದ ಮೀಸಲಾತಿಯಲ್ಲಿ ಮಾತ್ರ ಬದಲಾವಣೆ ಕಂಡುಬಂದಿದ್ದು, ಸಾಮಾನ್ಯ ಮಹಿಳೆ ವಿಭಾಗಕ್ಕೆ ಮೀಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading