ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನದ ಕಿರುಚಿತ್ರಕ್ಕೆ ಅತ್ಯುತ್ತಮ ಸಂಗೀತ ಪ್ರಶಸ್ತಿ

ಮೈಸೂರು ಸಿನಿಮಾ ಸೊಸೈಟಿ ವತಿಯಿಂದ ಆಯೋಜಿಸಲಾದ ‘ಗಂಧದ ಗುಡಿ ಸಿನಿ ಹಬ್ಬ 2026’ ಕನ್ನಡ ಕಿರುಚಿತ್ರೋತ್ಸವದಲ್ಲಿ ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ ಮಾಡಿರುವ ‘ಕಾಸಗಿ ಕನಸಿನ ಕಾಗದ’ (Kaasagi Kanasina Kaagada) ಕಿರುಚಿತ್ರವು ಅತ್ಯುತ್ತಮ ಸಂಗೀತ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

. . . . . . . . .


ಕನ್ನಡ ಕಿರುಚಿತ್ರಗಳ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಮೈಸೂರು ಸಿನಿಮಾ ಸೊಸೈಟಿ ಆಯೋಜಿಸಿದ ಈ ಕಿರುಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಪೈಕಿ ‘ಕಾಸಗಿ ಕನಸಿನ ಕಾಗದ’ ಕಿರುಚಿತ್ರದ ಸಂಗೀತ ನಿರ್ದೇಶನಕ್ಕೆ ಅತ್ಯುತ್ತಮ ಸಂಗೀತ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿದೆ.
ಸುಳ್ಯದ ಯುವ ಪ್ರತಿಭೆ ಮಯೂರು ಅಂಬೆಕಲ್ಲು ಅವರು ಈ ಕಿರುಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕಿರುಚಿತ್ರದ ಕಥೆಯ ಭಾವನೆಗಳಿಗೆ ಪೂರಕವಾಗಿ ಸಂಗೀತದ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿರುವ ಅವರ ಕೆಲಸಕ್ಕೆ ಈ ಪ್ರಶಸ್ತಿಯ ಮೂಲಕ ಮನ್ನಣೆ ದೊರೆತಿದೆ.
ನವೆಂಬರ್ 22ರಂದು ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಗಂಧದ ಗುಡಿ ಸಿನಿ ಹಬ್ಬ 2026ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಮಯೂರ್ ಅಂಬೆಕಲ್ಲು ಅವರ ಈ ಸಾಧನೆಗೆ ಚಿತ್ರತಂಡದವರು ಹಾಗೂ ಕಲಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading