- Friday
- August 21st, 2026
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ಆ.17ರಂದು ವಿಶೇಷ ಪೂಜೆ ನಡೆಯಿತು. ಅರ್ಚಕರಿಂದ ಶ್ರೀ ನಾಗ ದೇವರಿಗೆ ಹಾಲು ಹಾಗೂ ಸೀಯಾಳಾಭಿಷೇಕ ನೆರವೇರಿತು. ನೂರಾರು ಭಕ್ತಾಧಿಗಳು ಆಗಮಿಸಿ ಹಾಲು ಹಾಗೂ ಸೀಯಾಳವನ್ನು ಸೇವಾ ರೂಪದಲ್ಲಿ ಶ್ರೀ ದೇವರಿಗೆ ಅರ್ಪಿಸಿ ತೀರ್ಥ-ಪ್ರಸಾದವನ್ನು ಸ್ವೀಕರಿಸಿದರು. ದೇವಸ್ಥಾನದ ಸಿಬ್ಬಂದಿಗಳು ಸಹಕರಿಸಿದರು.
ಕೊಡಗು ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ ನೀಡಲಾಗುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ನಿವಾಸಿ ಪತ್ರಕರ್ತ ವಿನೋದ್ ಮೂಡಗದ್ದೆ ರವರು ಆಯ್ಕೆಯಾಗಿದ್ದಾರೆ. ಗುಂಡುಕಟ್ಟಿ ಎಸ್ಟೇಟ್ ಮ್ಹಾಲಕರಾದ ಜಿ.ಎಂ ಮಹೇಂದ್ರ ರವರು ತಮ್ಮ ತಂದೆ ಜಿ.ಎಂ ಮೋಹನ್ ರವರ ಹೆಸರಿನಲ್ಲಿ ನೀಡುತ್ತಿರುವ ದತ್ತಿನಿಧಿ ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ...
ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬ್ರಹ್ಮಾವರ ವಲಯದ ಜಂಟಿ ಆಶ್ರಯದಲ್ಲಿ ನೀಡಲಾಗುವ ಪ್ರತಿಷ್ಠಿತ “ಛಾಯಾರತ್ನ” ಪ್ರಶಸ್ತಿಗೆ ಸುಳ್ಯ ವಲಯದ ಛಾಯಾಗ್ರಾಹಕರಾದ ಸುಬ್ರಹ್ಮಣ್ಯದ ಲೋಕೇಶ್.ಬಿ.ಎನ್ ಆಯ್ಕೆಯಾಗಿದ್ದಾರೆ. ನಾಳೆ ಆ.18ರಂದು ಬ್ರಹ್ಮಾವರದ ರೋಟರಿ ಸಭಾಭವನದಲ್ಲಿ ಎಸ್.ಕೆ.ಪಿ.ಎ ಬ್ರಹ್ಮಾವರ ವಲಯದ ಬೆಳ್ಳಿ ಹಬ್ಬದ ವರ್ಷದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದಲ್ಲಿ...
ಬೂಡು ಶ್ರೀ ಭಗವತಿ ದೇವಸ್ಥಾನದಲ್ಲಿ ಸೋಣ ತಿಂಗಳ ಸಂಕ್ರಮಣ ಪೂಜೆ ಆ. 17ರಂದು ನೆರವೇರಿತು. ಈ ಸಂದರ್ಭದಲ್ಲಿ ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಆಗಮಿಸಿ ಸೇವಾ ರೂಪದಲ್ಲಿ ದೇವರಿಗೆ ಕಾಣಿಕೆ ಅರ್ಪಿಸಿದರು. ನೂರಾರು ಭಕ್ತಾದಿಗಳು ಈ ಪೂಜೆಯಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.
ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ದೇವರಮಾರು ನಾಗನಕಟ್ಟೆಯಲ್ಲಿ ನಾಗರಪಂಚಮಿ ಆಚರಣೆ ಶ್ರದ್ಧಾಭಕ್ತಿಯಿಂದ ನಡೆಯಿತು. ನಾಗರಪಂಚಮಿ ಅಂಗವಾಗಿ ನಾಗನಕಟ್ಟೆಯಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು. ನಾಗದೇವರಿಗೆ ಹಾಲು ಹಾಗೂ ಸಿಯಾಳಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.ನಾಗದೇವರ ಆರಾಧನೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತಾದಿಗಳು ಶ್ರದ್ಧೆಯಿಂದ ಪಾಲ್ಗೊಂಡರು. ದೇವಸ್ಥಾನದ ಪ್ರಧಾನ...
ಚೊಕ್ಕಾಡಿ ಎನ್ನುವುದು ಸುಪರಿಚಿತ ಪುಟ್ಟ ಗ್ರಾಮ. ಸಾಹಿತ್ಯ, ಸಂಸ್ಕೃತಿ, ಯಕ್ಷಗಾನ ಹೀಗೆ ಬಹುಮುಖಿ ಚಟುವಟಿಕೆಗಳಿಗೆ ಮುಡಿಪಿಟ್ಟ ಹಲವು ಮಹನೀಯರನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಇಲ್ಲಿಯದು. ಈ ಪುಟ್ಟ ಗ್ರಾಮದಲ್ಲಿ ಚೂಂತಾರು ಎನ್ನುವುದು ಒಂದು ಸಣ್ಣ ಬೈಲು. ಸಣ್ಣ ಬೈಲಿನಲ್ಲಿ ವೈದಿಕ ಮನೆತನಕ್ಕೆ ಸೇರಿದ ನಾಲ್ಕಾರು ಕುಟುಂಬಗಳು ಈ ಪ್ರತಿಷ್ಠಾನದ ರೂವಾರಿಗಳು. ಮನುಷ್ಯನಿಗೆ ವಿವಿಧ ರೀತಿಯ ಋಣ...
ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನದ ನಾಗನಕಟ್ಟೆಯಲ್ಲಿ ಈ ದಿನ ನಾಗರಪಂಚಮಿಯ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ, ಹಾಲು, ಸೀಯಾಳ ಅಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಾಳಿಕಾ ಪ್ರಸಾದ್ ಮಂಡೋಡಿ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.17ರಂದು ನಾಗರ ಪಂಚಮಿ ಪ್ರಯುಕ್ತ ಆಶ್ಲೇಷ ಬಲಿ ಹಾಗೂ ನಾಗತಂಬಿಲ ನಡೆಯಿತು. ಬೆಳಿಗ್ಗೆ ಶ್ರೀ ದೇವಳದ ನಾಗ ಸನ್ನಿಧಿಯಲ್ಲಿ ನಾಗ ತಂಬಿಲ ಹಾಗೂ ಕ್ಷೀರಾಭಿಷೇಕ ನಡೆಯಲಿದ್ದು, ಬಳಿಕ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮಾಜಿ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ, ವ್ಯವಸ್ಥಾಪನಾ...
ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆ ಯಲ್ಲಿ ಆ.17ರಂದು ಹಾಲಿನ ಅಭಿಷೇಕ ಸಿಯಾಳ ಅಭಿಷೇಕ ಮಂಗಳಾರತಿಯು ಅರ್ಚಕ ಅಡೂರಿನ ಸತ್ಯ ನಾರಾಯಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ಪುತ್ತೂರು: ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ 45ನೇ ವರ್ಷದ ಮಾನ್ಸೂನ್ ಚೆಸ್ ಪಂದ್ಯಾಟ ಇದೇ ಆಗಸ್ಟ್ ತಿಂಗಳ 18 ,19 ಮತ್ತು 20ರಂದು ನಡೆಯಲಿದೆ. ಈ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ , ಉಡುಪಿ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪಂದ್ಯಾಟವು ಸ್ವಿಸ್...
Loading posts...
All posts loaded
No more posts
