“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಆ.17)ದಿಂದ ಶನಿವಾರ(ಆ.22)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ಅಡಿಕೆ-ಕೊಬ್ಬರಿ ಸ್ಥಿರ, ಕಾಳುಮೆಣಸು ದರ ಏರಿಕೆ – ರಬ್ಬರ್‌ನಲ್ಲಿ ಕೊಂಚ ಇಳಿಕೆ..!

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಆಯಾ ದಿನಗಳ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಆಗಸ್ಟ್ 17 ಸೋಮವಾರದಿಂದ ಆಗಸ್ಟ್ 22 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದಿರುವ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

1) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ : ಮುಖ್ಯ ಅಡಿಕೆ ಹಾಗೂ ಉಪ ಉತ್ಪನ್ನಗಳಲ್ಲಿ ಸಂಪೂರ್ಣ ಸ್ಥಿರತೆ ; ಉಪ ಉತ್ಪನ್ನವಾದ ಉಳ್ಳಿ ಅಡಿಕೆಯ ದರದಲ್ಲಿ ಕೊಂಚ ಇಳಿಕೆ
ಈ ವಾರದ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಅಡಿಕೆಯ ಮುಖ್ಯ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್ ಹಾಗೂ ಉಪ ಉತ್ಪನ್ನಗಳಾದ ಫಟೋರಾ ಮತ್ತು ಕರಿಗೋಟು ಧಾರಣೆಗಳಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಉಪ ಉತ್ಪನ್ನವಾದ ಉಳ್ಳಿ ಅಡಿಕೆಯ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು.
ಹೊಸ ಅಡಿಕೆ – ಸೋಮವಾರದಂದು ಕನಿಷ್ಠ ₹400 ರಿಂದ ಗರಿಷ್ಠ ₹465 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಏರಿಳಿತವಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಹಳೆ ಅಡಿಕೆ ಹಾಗೂ ಡಬಲ್ ಚೋಲ್ – ಸೋಮವಾರದಂದು ಕನಿಷ್ಠ ₹390 ರಿಂದ ಗರಿಷ್ಠ ₹550 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಫಟೋರಾ – ಸೋಮವಾರದಂದು ಕನಿಷ್ಠ ₹320 ರಿಂದ ಗರಿಷ್ಠ ₹375 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಏರಿಳಿತವಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಉಳ್ಳಿ – ಸೋಮವಾರದಂದು ಕನಿಷ್ಠ ₹250 ರಿಂದ ಗರಿಷ್ಠ ₹270 ಇದ್ದ ಬೆಲೆ ಶನಿವಾರದಂದು ಕನಿಷ್ಠ ₹245 ರಿಂದ ಗರಿಷ್ಠ ₹265 ಕ್ಕೆ ಬಂದು ತಲುಪಿತ್ತು.(ಕನಿಷ್ಠ ಹಾಗೂ ಗರಿಷ್ಠ ದರಗಳಲ್ಲಿ ತಲಾ ₹5 ಇಳಿಕೆ)
ಕರಿಗೋಟು – ಸೋಮವಾರದಂದು ಕನಿಷ್ಠ ₹225 ರಿಂದ ಗರಿಷ್ಠ ₹255 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)

2) ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ : ಕಾಳುಮೆಣಸು ಧಾರಣೆಯಲ್ಲಿ ಏರಿಕೆ ; ಕೊಬ್ಬರಿ ಹಾಗೂ ಕೊಕ್ಕೋ ದರದಲ್ಲಿ ಸಂಪೂರ್ಣ ಸ್ಥಿರತೆ..!
ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಇತರೆ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಾಳುಮೆಣಸು ಧಾರಣೆಯಲ್ಲಿ ಏರಿಕೆ ಕಂಡುಬಂದಿದ್ದರೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿತ್ತು.
ಕಾಳುಮೆಣಸು – ಸೋಮವಾರದಂದು ಕನಿಷ್ಠ ₹580 ರಿಂದ ಗರಿಷ್ಠ ₹675 ಇದ್ದ ಬೆಲೆ ಶನಿವಾರದಂದು ಕನಿಷ್ಠ ₹590 ರಿಂದ ಗರಿಷ್ಠ ₹685 ಕ್ಕೆ ಬಂದು ತಲುಪಿತ್ತು.(ಕನಿಷ್ಠ ಹಾಗೂ ಗರಿಷ್ಠ ದರಗಳಲ್ಲಿ ತಲಾ ₹10 ಏರಿಕೆ)
ಕೊಬ್ಬರಿ – ಸೋಮವಾರದಂದು ಕನಿಷ್ಠ ₹140 ರಿಂದ ಗರಿಷ್ಠ ₹175 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಏರಿಳಿತವಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಕೊಕ್ಕೋ(ಹಸಿ/ಒಣ) – ಸೋಮವಾರದಿಂದ ಶನಿವಾರದವರೆಗೆ ಯಾವುದೇ ಏರಿಳಿತಗಳಿಲ್ಲದೇ ಹಸಿ ಕೊಕ್ಕೋ ಕನಿಷ್ಠ ₹70 ರಿಂದ ಗರಿಷ್ಠ ₹100 ಹಾಗೂ ಒಣ ಕೊಕ್ಕೋ ಕನಿಷ್ಠ ₹290 ರಿಂದ ಗರಿಷ್ಠ ₹320 ಗಳಲ್ಲೇ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು.

3) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆ : ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಕೊಂಚ ಇಳಿಕೆ..!
ಗ್ರೇಡ್ ರಬ್ಬರ್ – ಸೋಮವಾರದಂದು ₹273 ಇದ್ದ ಬೆಲೆ ಶನಿವಾರದಂದು ₹270 ಕ್ಕೆ ತಲುಪಿತ್ತು.(₹3 ಇಳಿಕೆ)
ಲಾಟ್ ರಬ್ಬರ್ – ಸೋಮವಾರದಂದು ₹251 ಇದ್ದ ಬೆಲೆ ಶನಿವಾರದಂದು ₹250 ಕ್ಕೆ ತಲುಪಿತ್ತು.(₹1 ಇಳಿಕೆ)
ಸ್ಕ್ರ್ಯಾಪ್ ಪ್ರಥಮ ದರ್ಜೆ – ಸೋಮವಾರದಂದು ₹168 ಇದ್ದ ಬೆಲೆ ಶನಿವಾರದಂದು ₹167 ಕ್ಕೆ ತಲುಪಿತ್ತು.(₹1 ಇಳಿಕೆ)
ಸ್ಕ್ರ್ಯಾಪ್ ದ್ವಿತೀಯ ದರ್ಜೆ – ಸೋಮವಾರದಂದು ₹158 ಇದ್ದ ಬೆಲೆ ಶನಿವಾರದಂದು ₹157 ಕ್ಕೆ ತಲುಪಿತ್ತು.(₹1 ಇಳಿಕೆ)

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಈ ವಾರದ(ಆಗಸ್ಟ್ 17 ಸೋಮವಾರದಿಂದ ಆಗಸ್ಟ್ 22 ಶನಿವಾರದವರೆಗಿನ) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಆವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading