ಸವೇರಪುರ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ನಮ್ಮ ಶಾಲೆಯಲ್ಲಿ ಶಾಲಾ ಜೊತೆ ಕಾರ್ಯದರ್ಶಿ ಗಳಾದ ವಂದನೀಯ ಫಾದರ್ ಜಯಪ್ರಕಾಶ್ ಡಿಸೋಜಾ ರವರ ನೇತೃತ್ವದಲ್ಲಿ ಧ್ವಜಾರೋಹಣವು ನೆರವೇರಿತು. ಈ ಕಾರ್ಯಕ್ರಮದ ಮೊದಲಿಗೆ ಮುಖ್ಯ ಅತಿಥಿಗಳನ್ನು ಶಾಲಾ ವಾದ್ಯ ಗೋಷ್ಠಿಯೊಂದಿಗೆ ವೇದಿಕೆಗೆ ಸ್ವಾಗತಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿ ಶ್ರೀಯುತ ಅಬ್ರಹಾಂ ಭಾಗವಹಿಸಿ ಧ್ವಜಾರೋಹಣಗೈದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲ್ಯಾನ್ಸಿ ಡಿಸೋಜಾರವರು, ಹಾಗೂ ಶಿಕ್ಷಕ-ರಕ್ಷಕ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಲೂಕಸ್ ಟಿ.ಐ , ಶಾಲಾ ಮುಖ್ಯ ಶಿಕ್ಷಕಿ ಅನಿತಾ ಫೆರ್ನಾಂಡಿಸ್ ರವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ತಮ್ಮ ಸಂದೇಶದಲ್ಲಿ ಮಕ್ಕಳು ತಮ್ಮ ಜೀವನದಲ್ಲಿ ದೇಶಪ್ರೇಮವನ್ನು ಅಳವಡಿಸಬೇಕೆಂದು ತಿಳಿಸಿದರು.ನಂತರ ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಶಾಲಾ ಸಂಚಾಲಕರು ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ದೇಶಪ್ರೇಮವನ್ನು ಬಿಂಬಿಸುವ ಭಾಷಣವನ್ನು ಮತ್ತು ದೇಶಭಕ್ತಿಗೀತೆಗಳನ್ನು , ನೃತ್ಯಗಳನ್ನು ಪ್ರಸ್ತುತಪಡಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading