ಗಾಂಧಿನಗರ 80 ನೇ ಸ್ವಾತಂತ್ರ್ಯೋತ್ಸವ – ಸೌಹಾರ್ದತೆ, ಮಾನವೀಯತೆ ದೇಶದ ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ : ಅಹ್ಸನಿ

. . . . . . . . .

ಸುಳ್ಯ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದ್ರಸ, ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ತರ್ಭಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ 80 ನೇ ಸ್ವಾತಂತ್ರ್ಯ ದಿನಾಚಣೆಯ ನ್ನು ಸಡಗರ ಸಂಭ್ರಮ ದಿಂದ ಆಚರಿಸಲಾಯಿತು
ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ಧ್ವಜಾರೋಹಣ ನೆರವೇರಿಸಿದರು
ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುವಾ ಪ್ರಾರ್ಥನೆ ಮಾಡಿದರು
ಮುದರ್ರಿಸರಾದ ಶಿಹಾಬುದ್ದೀನ್ ಅಹ್ಸನಿ ಮಾತನಾಡಿ ದೇಶ, ಭಾಷೆ, ಜಲ, ನೆಲದ ಬಗ್ಗೆ ವಿಶೇಷ ಅಭಿಮಾನ ಹೊಂದಬೇಕು
ಅಭಿವೃದ್ಧಿ ಅಂತ ಹೇಳಿದರೆ ರಸ್ತೆ, ಕಟ್ಟಡಗಳು ಮಾತ್ರವಲ್ಲ
ಸೌಹಾರ್ದತೆ, ಮಾನವೀಯತೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದರು
ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ದಿಕ್ಸುಚಿ ಭಾಷಣ ಮಾಡಿದರು
ವೇದಿಕೆಯಲ್ಲಿ ಎಂಜೆಎಂ ಪದಾಧಿಕಾರಿಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಹಾಜಿ ಐ. ಇಸ್ಮಾಯಿಲ್, ಹಾಜಿ ಎಸ್. ಎಂ. ಅಬ್ದುಲ್ ಹಮೀದ್, ನಿರ್ದೇಶಕರಾದ ಅಬೂಬಕ್ಕರ್ ಸಿದ್ದೀಕ್ ಕೊ ಡಿಯಮ್ಮೆ, ಮೊದಲಾದವರು ಉಪಸ್ಥಿತರಿದ್ದರು, ಮದ್ರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿದರು ಮದ್ರಸ ವಿದ್ಯಾರ್ಥಿ ಗಳ ದೇಶ ಭಕ್ತಿ ಗಾನ ಗಮನ ಸೆಳೆಯಿತು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading