ಸುಳ್ಯ : ಮಂಡೆಕೋಲು ಗ್ರಂಥಾಲಯದಲ್ಲಿ ಕ್ಯೂಆರ್ ಕೋಡ್ ಮೂಲಕ ಸಾವಿರಾರು ಪುಸ್ತಕ, ಪತ್ರಿಕೆಗಳ ಓದಲು ಅವಕಾಶ

ಸುಳ್ಯ : ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯು ಗ್ರಂಥಾಲಯ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷಿ ಹಾಗೂ ಕ್ರಾಂತಿಕಾರಿ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ. ಆಯ್ದ ಪುಸ್ತಕಗಳು ಹಾಗೂ ವಿವಿಧ ನಿಯತಕಾಲಿಕಗಳನ್ನು, ಹಳೆಯ ಪತ್ರಿಕೆಗಳ ಸಹಿತ, ಕ್ಯೂಆರ್ ಕೋಡ್ ಮೂಲಕ ಓದುವ ಮತ್ತು ಡೌನ್‌ಲೋಡ್ ಮಾಡಿಕೊಳ್ಳುವ ವಿಶಿಷ್ಟ ಯೋಜನೆ ಇದಾಗಿದೆ. ಈ ಯೋಜನೆಯು ಪ್ರಾಯೋಗಿಕವಾಗಿ ರಾಜ್ಯದ ಹತ್ತು ಗ್ರಂಥಾಲಯಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಂಥಾಲಯವೂ ಇದರಲ್ಲಿ ಆಯ್ಕೆಯಾಗಿದೆ.

. . . . . . . . .

ಯೋಜನೆಯ ಮೂಲಕ ಸುಮಾರು 10 ಸಾವಿರಕ್ಕೂ ಅಧಿಕ ಪತ್ರಿಕೆಗಳು, ನಿಯತಕಾಲಿಕಗಳು ಹಾಗೂ ವಿವಿಧ ಪುಸ್ತಕಗಳನ್ನು ಗ್ರಂಥಾಲಯದಲ್ಲಿಯೇ ಓದಲು ಅವಕಾಶ ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳು, ‘ತರಂಗ’, ‘ಚಂಪಕ’ ಸೇರಿದಂತೆ ವಿವಿಧ ಪತ್ರಿಕೆಗಳು ಹಾಗೂ ಅಧ್ಯಯನ ಸಾಮಗ್ರಿಗಳನ್ನು ಕ್ಯೂಆರ್ ಕೋಡ್ ಮೂಲಕ ಓದಬಹುದಾಗಿದೆ. ಅಗತ್ಯವಿದ್ದಲ್ಲಿ ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಹಾಗೂ ಪ್ರಿಂಟ್ ತೆಗೆದುಕೊಳ್ಳುವ ಸೌಲಭ್ಯವೂ ಇರಲಿದೆ.

. . . . . . .

ಪ್ರತಿದಿನ ಬೆಳಿಗ್ಗೆ 4:00 ಗಂಟೆಯಿಂದಲೇ ಡಿಜಿಟಲ್ ರೂಪದಲ್ಲಿ ಲಭ್ಯವಾಗುವ ಪತ್ರಿಕೆಗಳು ಮತ್ತು ಇತರ ಓದುವ ಸಾಮಗ್ರಿಗಳನ್ನು ಓದುಗರು ಬಳಸಿಕೊಳ್ಳಬಹುದಾಗಿದೆ. ಇದರೊಂದಿಗೆ ಸ್ಥಳೀಯ ಪತ್ರಿಕೆಗಳನ್ನೂ ಯೋಜನೆಗೆ ಅಳವಡಿಸಲಾಗುವುದು. ಓದುಗರಿಗೆ ಅಗತ್ಯವಿರುವ ಹೊಸ ಪತ್ರಿಕೆಗಳು ಅಥವಾ ಪುಸ್ತಕಗಳಿದ್ದಲ್ಲಿ ಅವುಗಳನ್ನೂ ಯೋಜನೆಯಡಿ ಅಳವಡಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ಅಪಾರ ಪ್ರಮಾಣದ ಓದುವ ಸಾಮಗ್ರಿಗಳು ಲಭ್ಯವಾಗಲಿರುವುದು ಯೋಜನೆಯ ವಿಶೇಷತೆಯಾಗಿದೆ. ಮಂಡೆಕೋಲು ಗ್ರಂಥಾಲಯದಲ್ಲಿ ಈ ಯೋಜನೆ ಜಾರಿಯಾಗುವುದರಿಂದ ತಾಲೂಕಿನ ಓದುಗರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading