ಇಂದಿನ(ಆಗಸ್ಟ್ 11) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಮತ್ತು ಕಾಳುಮೆಣಸು ದರದಲ್ಲಿ ಇಳಿಕೆ ; ಅಡಿಕೆ ಹಾಗೂ ಕೊಬ್ಬರಿ ಸಂಪೂರ್ಣ ಸ್ಥಿರ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ದಿನಾಂಕ : 11 ಆಗಸ್ಟ್ 2026
ವಾರ : ಮಂಗಳವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 11) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 390 ರಿಂದ 475
ಹಳೆ ಅಡಿಕೆ : 390 ರಿಂದ 550
ಡಬಲ್ ಚೋಲ್ : 390 ರಿಂದ 550
ಫಟೋರಾ : 320 ರಿಂದ 375
ಉಳ್ಳಿ : 250 ರಿಂದ 270
ಕರಿಗೋಟು : 225 ರಿಂದ 255
ಕ್ಯಾಂಪ್ಕೋ ಸಂಸ್ಥೆಯ ಇಂದಿನ(ಆಗಸ್ಟ್ 11) ಅಡಿಕೆ ಮಾರುಕಟ್ಟೆ ಧಾರಣೆ ಬಿಡುಗಡೆಯಾಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ನಿರಂತರ ಸ್ಥಿರತೆ ಕಂಡುಬಂದಿದ್ದು, ಪ್ರಮುಖ ತಳಿಗಳಾದ ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಉಪ ಉತ್ಪನ್ನಗಳಾದ ಫಟೋರಾ, ಉಳ್ಳಿ ಮತ್ತು ಕರಿಗೋಟು ಧಾರಣೆಗಳು ನಿನ್ನೆಯ(ಆಗಸ್ಟ್ 10) ಮಟ್ಟದಲ್ಲೇ ಸಂಪೂರ್ಣ ತಟಸ್ಥವಾಗಿ ಮುಂದುವರಿದಿವೆ.
ಸ್ಥಿರತೆಯಲ್ಲಿ ಪ್ರಮುಖ ತಳಿಗಳು : ಹೊಸ ಅಡಿಕೆ ಗರಿಷ್ಠ ₹475 ರಲ್ಲಿದ್ದರೆ, ಹಳೆ ಅಡಿಕೆ ಮತ್ತು ಡಬಲ್ ಚೋಲ್ ವಿಭಾಗಗಳು ಪ್ರತಿ ಕೆಜಿಗೆ ಗರಿಷ್ಠ ₹550 ರ ಉತ್ತಮ ದರದಲ್ಲಿಯೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಬದಲಾಗದ ಉಪ ಉತ್ಪನ್ನಗಳು : ಫಟೋರಾ(ಗರಿಷ್ಠ ₹375), ಉಳ್ಳಿ(ಗರಿಷ್ಠ ₹270) ಹಾಗೂ ಕರಿಗೋಟು(ಗರಿಷ್ಠ ₹255) ಧಾರಣೆಗಳಲ್ಲಿ ಇಂದು ಯಾವುದೇ ಏರಿಳಿತ ಕಂಡುಬಂದಿಲ್ಲ.
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 585 ರಿಂದ 680
ಹಸಿ ಕೊಕ್ಕೋ : 70 ರಿಂದ 100
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 140 ರಿಂದ 175
ಕ್ಯಾಂಪ್ಕೋ ಸಂಸ್ಥೆಯ ಇಂದಿನ(ಆಗಸ್ಟ್ 11) ಕೃಷಿ ಉತ್ಪನ್ನಗಳ ಮಾರುಕಟ್ಟೆ ಧಾರಣೆ ಬಿಡುಗಡೆಯಾಗಿದೆ. ಕಾಳುಮೆಣಸಿನ ಗರಿಷ್ಠ ದರದಲ್ಲಿ ಪ್ರತಿ ಕೆಜಿಗೆ ₹5 ಇಳಿಕೆ ಕಂಡುಬಂದಿದ್ದರೆ, ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳು ನಿನ್ನೆಯ(ಆಗಸ್ಟ್ 10) ಬಲಿಷ್ಠ ಮಟ್ಟದಲ್ಲೇ ಸ್ಥಿರವಾಗಿ ಮುಂದುವರಿದಿವೆ.
ಕಾಳುಮೆಣಸು ದರದಲ್ಲಿ ಇಳಿಕೆ: ನಿನ್ನೆ ಗರಿಷ್ಠ ₹685 ರಲ್ಲಿದ್ದ ಕಾಳುಮೆಣಸಿನ ಗರಿಷ್ಠ ದರ ಇಂದು ಪ್ರತಿ ಕೆಜಿಗೆ ₹5 ಕಡಿಮೆಯಾಗಿ ₹680 ಕ್ಕೆ ತಲುಪಿದೆ.
₹175 ರಲ್ಲೇ ಕೊಬ್ಬರಿ ಸ್ಥಿರ : ಕೊಬ್ಬರಿ ಧಾರಣೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಪ್ರತಿ ಕೆಜಿಗೆ ಗರಿಷ್ಠ ₹175 ರ ಉತ್ತಮ ದರದಲ್ಲೇ ವಹಿವಾಟು ನಡೆಸುತ್ತಿದೆ.
ಕೊಕ್ಕೋ ಯಥಾಸ್ಥಿತಿ : ಹಸಿ ಕೊಕ್ಕೋ ಗರಿಷ್ಠ ₹100 ಹಾಗೂ ಒಣ ಕೊಕ್ಕೋ ಗರಿಷ್ಠ ₹320 ರ ನಿನ್ನೆಯ ದರದಲ್ಲೇ ಸ್ಥಿರವಾಗಿದೆ.
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)

ರಬ್ಬರ್ ಧಾರಣೆ
ಗ್ರೇಡ್ : 280
ಲಾಟ್ : 255
ಸ್ಕ್ರ್ಯಾಪ್ ಪ್ರಥಮ ದರ್ಜೆ : 171
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 161
ಕ್ಯಾಂಪ್ಕೋ ಸಂಸ್ಥೆಯ ಇಂದಿನ(ಆಗಸ್ಟ್ 11) ರಬ್ಬರ್ ಮಾರುಕಟ್ಟೆ ಧಾರಣೆ ಬಿಡುಗಡೆಯಾಗಿದೆ. ನಿನ್ನೆಗೆ(ಆಗಸ್ಟ್ 10) ಹೋಲಿಸಿದರೆ ಇಂದಿನ ರಬ್ಬರ್ ಮಾರುಕಟ್ಟೆಯಲ್ಲಿ ಗ್ರೇಡ್ ರಬ್ಬರ್ ದರದಲ್ಲಿ ಪ್ರತಿ ಕೆಜಿಗೆ ₹2.50 ಹಾಗೂ ಲಾಟ್ ರಬ್ಬರ್‌ನಲ್ಲಿ ₹1 ರಷ್ಟು ಇಳಿಕೆ ಕಂಡುಬಂದಿದೆ. ಇದರೊಂದಿಗೆ ಸ್ಕ್ರ್ಯಾಪ್ ರಬ್ಬರ್‌ನ ಎರಡೂ ವಿಭಾಗಗಳಲ್ಲೂ ತಲಾ ₹1 ಕಡಿತವಾಗಿದೆ.
₹280 ಕ್ಕೆ ಇಳಿದ ಗ್ರೇಡ್ ರಬ್ಬರ್ : ಗ್ರೇಡ್ ರಬ್ಬರ್ ಮಾರುಕಟ್ಟೆಯಲ್ಲಿ ಕೊಂಚ ಹಿನ್ನಡೆಯಾಗಿದ್ದು, ಇಂದು ಪ್ರತಿ ಕೆಜಿಗೆ ₹2.50 ಕಡಿಮೆಯಾಗಿ ₹280 ಕ್ಕೆ ತಲುಪಿದೆ.
ಲಾಟ್ ರಬ್ಬರ್ ದರ ಕಡಿತ : ನಿನ್ನೆ ₹256 ರಲ್ಲಿದ್ದ ಲಾಟ್ ರಬ್ಬರ್ ಧಾರಣೆಯು ಇಂದು ₹1 ಇಳಿಕೆಯಾಗಿ ₹255 ರ ಮಟ್ಟಕ್ಕೆ ಬಂದಿದೆ.
ಸ್ಕ್ರ್ಯಾಪ್ ರಬ್ಬರ್‌ನಲ್ಲೂ ಇಳಿಕೆ : ಸ್ಕ್ರ್ಯಾಪ್ ಪ್ರಥಮ ದರ್ಜೆ ₹171 ಕ್ಕೆ ಹಾಗೂ ದ್ವಿತೀಯ ದರ್ಜೆ ₹161 ಕ್ಕೆ ಇಳಿಕೆಯಾಗಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading