ಎಡಮಂಗಲ-ಪುಳಿಕುಕ್ಕು, ಮರ್ಕಂಜ-ಎಲಿಮಲೆ ರಸ್ತೆ ಅಭಿವೃದ್ಧಿಗೆ ಡಿಪಿಆರ್ ಪ್ರಕ್ರಿಯೆ ಟೆಂಡರ್ ಪೂರ್ಣ

ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಡಮಂಗಲ-ಪುಳಿಕುಕ್ಕು ರಸ್ತೆಯನ್ನು ₹4 ಕೋಟಿ, ಮರ್ಕಂಜ-ಎಲಿಮಲೆ ರಸ್ತೆಯನ್ನು ₹5 ಕೋಟಿ ಹಾಗೂ ಐವರ್ನಾಡು-ದರ್ಖಾಸು ರಸ್ತೆಯನ್ನು ₹3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವಂತೆ ಒಟ್ಟು ₹12 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆಗೆ ಶಾಸಕಿ ಭಾಗೀರಥಿ ಸಲ್ಲಿಸಿದ್ದರು.

. . . . . . . . .

ಈ ಪ್ರಸ್ತಾವನೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಅನುಮೋದನೆಗೊಂಡಿದ್ದು, ರಸ್ತೆಗಳ ಸಮಗ್ರ ಯೋಜನಾ ವರದಿ(DPR) ಸಿದ್ಧಪಡಿಸಲು ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಡಿಪಿಆರ್ ವರದಿ ಸಲ್ಲಿಕೆಯಾಗಲಿದ್ದು, ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳ ತಾಂತ್ರಿಕ ಪ್ರಕ್ರಿಯೆಗಳು ಆರಂಭವಾಗಲಿವೆ.

. . . . . . .

ರಾಜ್ಯದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಂತ ಹಂತವಾಗಿ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಕರೆಯಲಾಗುತ್ತಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳ ರಸ್ತೆಗಳಿಗೆ ಹಂತ-5, ಘಟ್ಟ-2ರ ಕಾಮಗಾರಿಗಳ ಡಿಪಿಆರ್ ಸಿದ್ಧಪಡಿಸುವ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading